ಕರ್ನಾಟಕ ಪ್ರಾಂತ ರೈತ ಸಂಘಟನೆ(KPRS)ಯಿಂದ ಹತ್ತಿ, ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ದೇವದುರ್ಗ . ಜಾಲಹಳ್ಳಿಯಲ್ಲಿ ಬತ್ತ ಹತ್ತಿ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಹಾಗೂ ಫಸಲ ಭಿಮ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಕೆಪಿಆರ್ ಎಸ್ ನೇತೃದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ಚಳುವಳಿಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ನರಸಣ್ಣ ನಾಯಕ ಮಾತನಾಡಿ, ರೈತರು ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ದಿನ ನಿತ್ಯ ರೈತರು ತಾವು ಬೆಳೆದ ಬೆಳೆಗಳನ್ನು ದಲ್ಲಾಳಿಗಳ ಮುಖಾಂತರ ಮಾರಾಟ ಮಾಡಿ ಮೋಸ ಹೋಗುತ್ತಿದ್ದಾರೆ ಇದನ್ನು ಸರ್ಕಾರ ಮತ್ತು ಜನ ಪ್ರತಿನಿಧಿಗಳು ಅವರ ಕಷ್ಟ ನೋಡಿದರು ಮೌನ ವಹಿಸುತ್ತಿದ್ದಾರೆ. ಇದರಿಂದ ಜನರ ಬದಕು ಶೊಚನಿಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಹನುಮಂತ ಪೂಜಾರಿ, ಉಪಾಧ್ಯಕ್ಷರಾದ ಶಬ್ಬೀರ ಜಾಲಹಳ್ಳಿ, ಲಿಂಗಣ್ಣ ಮಕಾಶಿ, ಮುಕ್ಕನಗೌಡ ಮುತ್ತಣ್ಣ ಹನುಮಂತ ದುರಗಪ್ಪ ಬಸವರಾಜ ಮುಂತಾವರು ಇದ್ದರು.

Share and Enjoy !

Shares