ಕೋವಿಡ್ ವರದಿ ಹಾಗೂ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ – ಪ್ರಾಂಶುಪಾಲ ವಿಜಯಕುಮಾರ್ H ನಾಯಕ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು :- ಕೊರೋನಾ ದಿಂದಾಗಿ ಕಳೆದ ಎಂಟು ತಿಂಗಳಿಂದ ಬಾಗಿಲುಮುಚ್ಚಿದ್ದ ಕಾಲೇಜುಗಳು ಸೋಮವಾರದಿಂದ ಪ್ರಾರಂಭಗೊಂಡಿದ್ದು ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಾಲೇಜುಗಳಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ವಿಜಯಕುಮಾರ್ H ನಾಯಕ ಅವರು ಹೇಳಿದರು.
ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರ್ಕಾರದ ನಿರ್ದೇಶನದಂತೆ ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಕೋವಿಡ್ -19 ಆರ್ ಟಿ ಪಿ ಆರ್ ರಿನ ನೆಗೆಟಿವ್ ವರದಿ ಮತ್ತು ಕಾಲೇಜಿಗೆ ಬರಲು ಪೋಷಕರ ಒಪ್ಪಿಗೆಯ ಪತ್ರದೊಂದಿಗೆ ವಿದ್ಯಾರ್ಥಿಗಳು ಬರಬೇಕು ಕರೆ ನೀಡಿದರು. ತಾಲೂಕಿನ ಸರಕಾರಿ ಆಸ್ಪತ್ರಯಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಗಿದೆ ಎಂದರು.ಪ್ರಸಕ್ತ ವರ್ಷ ಕಂಪ್ಯೂಟರ್ ಸೈನ್ಸ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮೂರು ವಿಭಾಗಗಳಿಂದ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಾಲೇಜಿನಲ್ಲಿ ಉತ್ತಮವಾದ ಮೂಲಸೌಕರ್ಯಗಳ ಇರುವುದರಿಂದ ಪ್ರತಿ ವರ್ಷವೂ ದಾಖಲಾತಿ ಪ್ರಮಾಣದಲ್ಲಿ ಗಣನೀಯ ಏರಿಕೆ ಯಾಗುತ್ತಿರುವುದು ಸಂತೋಷದ ವಿಷಯವಾಗಿದೆ. ಕಾಲೇಜಿನಲ್ಲಿ ಎಲ್ಲರಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಎಂದು ತಿಳಿಸಿದರು. ಕಾಲೇಜಿಗೆ ಪ್ರಾರಂಭದ ಮೊದಲ ದಿನ ಆಗಿರುವುದರಿಂದ ಹಾಜರಾತಿ ಕಡಿಮೆಯಾಗಿದೆ. ಒಂದು ವೇಳೆ ವಿದ್ಯಾರ್ಥಿಗಳು ದೈನಂದಿನ ತರಗತಿಗೆ ಹಾಜರಾಗಲು ಇಷ್ಟವಿಲ್ಲದಿದ್ದರೆ ಅವರಿಗೆ ಇಲಾಖೆ ವತಿಯಿಂದ ಆನ್ಲೈನ್ ತರಗತಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಉಪನ್ಯಾಸಕರು ಮಾಡಿರುವ ಪಾಠಗಳನ್ನು ಆನ್ಲೈನ್ ಮೂಲಕ ಲಿಂಕ್ಗಳನ್ನು ಕಳುಹಿಸಲಾಗುವುದು ವಿದ್ಯಾರ್ಥಿಗಳು ಲಿಂಕನ್ನು ಓಪನ್ ಮಾಡಿ ಪಾಠಪ್ರವಚನ ಕಲಿಯಬಹುದಾಗಿದೆ ಎಂದು ತಿಳಿಸಿದರು. ಇಲಾಖೆಯಿಂದ ನೂತನ ವೇಳಾಪಟ್ಟಿಯನ್ನು ತಯಾರು ಮಾಡಲಾಗಿದೆ ಈ ನಿಟ್ಟಿನಲ್ಲಿ ನಿರಂತರ ತರಗತಿಗಳನ್ನು ನಡೆಸಿ ಪಾಠ-ಪ್ರವಚನ ಮಾಡಲಾಗುವುದು ಇದುವರೆಗೂ ಇಲಾಖೆ ಕಡೆಯಿಂದ ಪಠ್ಯವನ್ನು ಕಡಿತಗೊಳಿಸುವ ಬಗ್ಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು
ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಲಿಂಗಸೂಗೂರು ಪ್ರಾಂಶುಪಾಲ ವಿಜಯಕುಮಾರ್ H ನಾಯಕ ತಿಳಿಸಿದ್ದಾರೆ.

Share and Enjoy !

Shares