ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿ : ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಪಂಗಡಕ್ಕೆ 7.5 % ಮೀಸಲಾತಿ ಹೆಚ್ಚಿಸಲು u ರಾಜ್ಯ ಸರ್ಕಾರ ಉಪಸಮಿತಿ ರಚಿಸಲು ಒಪ್ಪಿಗೆ ನೀಡಿ ಮಹತ್ವದ ನಿರ್ಧಾರ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಕಲ್ಯಾಣ ಕರ್ನಾಟಕ ಶ್ರೀರಾಮುಲು ಅಭಿಮಾನಿಗಳ ಸಂಘದ ಉಪಾಧ್ಯಕ್ಷ ರಾದ ಆರ್.ಕೆ.ನಾಯಕ ಮಸ್ಕಿ ಹರ್ಷ ವ್ಯಕ್ತಪಡಿಸಿದ್ದಾರೆ .
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ಸಂಪುಟ ಉಪ ಸಮಿತಿ ರಚನೆ ಶ್ರೀರಾಮುಲುರವರ ನಿರಂತರ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ. ದೀನ ದಲಿತರ ಉದ್ಧಾರಕ ಬಿ ಶ್ರೀರಾಮುಲು ಅವರಂಥ ನಾಯಕರನ್ನು ಪಡೆದ ನಾವೇ ಧನ್ಯರು, ನಾಯಕ ಸಮುದಾಯದ ಹೋರಾಟ ಹಾಗೂ ಮನವಿಗೆ ಸ್ಪಂದಿಸಿ ಈ ಮಹತ್ವದ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಹಾಗೂ ಸಮಾಜ ಕಲ್ಯಾಣ ಸಚಿವರಾದ ಬಿ . ಶ್ರೀರಾಮುಲು ರವರಿಗೆ ಹಾಗೂ ಸಮುದಾಯದ ಎಲ್ಲಾ ಸಚಿವರಿಗೆ, ಸಂಸದರಿಗೆ ಧನ್ಯವಾದಗಳು .
7 % ಮೀಸಲಾತಿಯಿಂದ ನಾಯಕ ಸಮಾಜಕ್ಕೆ ಸಾಕಷ್ಟು ಅನುಕೂಲವಾಗಿ ಭವಿಷ್ಯದಲ್ಲಿ ಯುವ ಸಮೂಹಕ್ಕೆ ಬದುಕು ಕಟ್ಟಿಕೊಳ್ಳಲು ವಿದ್ಯಾಭ್ಯಾಸಕ್ಕೆ , ರಾಜಕೀಯವಾಗಿ,ಸಾಮಾಜಿಕವಾಗಿ, ಉನ್ನತ ಮಟ್ಟಕ್ಕೆ ಬೆಳೆಯಲು ಅನುಕೂಲವಾಗುತ್ತದೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು