ಮಾನ್ವಿ ಪೊಲೀಸರ ಕಾರ್ಯಾಚರಣೆ ರಾಜ್ಯ ಹೆದ್ದಾರಿ ದರೋಡೆಕೋರರ ಬಂಧನ:ಎಸ್.ಪಿ. ಪ್ರಕಾಶ ನಿಕ್ಕಿಂ ಶ್ಲಾಘನೆ,ಬಹುಮಾನ ಘೋಷಣೆ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಮಾನ್ವಿ:ಕಳೆದ ರಾತ್ರಿ 7.ಗಂ. ಸಮಯದಲ್ಲಿ ಮಾನ್ವಿ ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಮಾನ್ವಿ ಕಡೆಯಿಂದ ರಾಯಚೂರು ಕಡೆಗೆ ಹೊರಟಿದ್ದ ವಾಹನ ತಡೆದು ಕಾರಿನಲ್ಲಿದ್ದವರಿಗೆ ಚಾಕು ತೋರಿಸಿ ಬಂಗಾರದ ಒಡವೆ ಹಾಗೂ ಹಣ ದೋಚಿಕೊಂಡು ಪರಾರಿಯಾಗಿದ್ದ ದರೋಡೆಕೋರರನ್ನು ಬಂಧಿಸುವಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಮಾನ್ವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುರುವಾರ ಸಂಜೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಿಂ ಅವರು ನ.18 ರಂದು ರಾತ್ರಿ 7.ಗಂ ಸಮಯದಲ್ಲಿ ಸಿರುಗುಪ್ಪದಿಂದ ಮಾನ್ವಿ ಮೂಲಕ ರಾಯಚೂರು ಕಡೆಗೆ ಮಾರುತಿ ಒಮನಿ ವಾಹನದಲ್ಲಿ ಹೊರಟಿದ್ದ ಲಕ್ಷ್ಮೀದೇವಿ ಮಂಜುನಾಥಸ್ವಾಮಿ ಕುಟುಂಬದವರು ಈ ವೇಳೆ ಏಕಾಏಕಿ ರಾಜ್ಯ ಹೆದ್ದಾರಿ ಬಳಿ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಕಾರುನಲ್ಲಿದ್ದವರಿಗೆ ಮಾರಾಕಾಸ್ತ್ರ ತೋರಿಸಿ 125 ಗ್ರಾಂ ಬಂಗಾರ (5.ಲಕ್ಷ ಮೌಲ್ಯ) ಹಾಗೂ 20 ಸಾವಿರ ರೂ. ಹಣ ಮತ್ತು 15 ಸಾವಿರ ಮೌಲ್ಯದ ಮೊಬೈಲ್‍ನ್ನು ದೋಚಿ ಪರಾರಿಯಾಗಿದ್ದರು.
7.15 ರ ಸಮಯದಲ್ಲಿ ಮಾನ್ವಿ ಪೊಲೀಸ್ ಠಾಣೆಯಲ್ಲಿ ಲಕ್ಷ್ಮೀದೇವಿ ನೀಡಿದ ದೂರನ್ನು ಆಧರಿಸಿ ಎಸ್.ಪಿ. ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ದತ್ತಾತ್ರೇಯ ಕಾರ್ನಾಡ್, ಪಿಎಸ್‍ಐಗಳಾದ ಸಿದ್ರಾಮ ಬಿದರಾಣಿ, ಸುಜಾತ ಸಿರವಾರ, ವೆಂಕಟೇಶ ಕವಿತಾಳ ನೇತೃತ್ವದ ಎಸ್‍ಐ ವೀರನಗೌಡ, ಸಿಬ್ಬಂದಿಗಳಾದ ರಾಮಪ್ಪ, ರಮೇಶ, ಹುಸೇನ್‍ಸಾಬ್, ಗೋವಿಂದರಾಜ್, ಅಪ್ಜಲ್‍ಪಾಷ, ಚಾಂದ್‍ಪಾಷ, ಡೇವಿಡ್, ದೇವರಾಜ್, ಪ್ರಕಾಶ, ಚರಣ್‍ರಾಜ್, ಶಾಂತಕುಮಾರ, ಅಜಿಮ್‍ಪಾಷ, ಡಾಕಪ್ಪ, ಗಂಗಪ್ಪ ಪೊಲೀಸ್ ತಂಡವು 16 ಗಂಟೆಯೂಳಗೆ ದರೋಡೆಕೋರರನ್ನು ಬಂಧಿಸುವಲ್ಲಿ ಮಾನ್ವಿ ಯಶಸ್ವಿಯಾಗಿದ್ದಾರೆ. ಈ ದರೋಡೆ ಕೃತ್ಯದಲ್ಲಿ ಚಾಲಕ ಗುರುರಾಜ ರಾಯಚೂರು ಕೈವಾಡದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಪೊಲೀಸ್ ಸಿಬ್ಬಂದಿಗಳಾದ ರಾಮಪ್ಪ, ಹುಸೇನ್‍ಸಾಬ್ ಚಾಕಚಕ್ಯತೆಯಿಂದ ಮೊಬೈಲ್‍ನಲ್ಲಿದ್ದ ಸಂದೇಶಗಳ ಜಾಡು ಹಿಡಿದು ಕಾರ್ಯಪ್ರವೃತ್ತರಾಗಿ ದರೋಡೆಕೋರರನ್ನು ಬಂಧಿಸಲಾಗಿದೆ ಎಂದರು.
ಚಾಲಕ ಗುರುರಾಜ ನೀಡಿದ ಸಂದೇಶದ ಸುಳಿವಿನ ಮೇರೆಗೆ ರಾಜ್ಯ ಹೆದ್ದಾರಿ ದರೋಡೆಗೆ ಸಹಕರಿಸಿದ್ದು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶೇಖ್ ಅಬ್ದುಲ್ಲಾ ಮುಜಾಹಿದ್, ಗುರುಕುಮಾರ, ಸೈಯದ್ ಹಕೀಬ್ ಹುಸೇನ್, ಅಸ್ಲಂಪಾಷ ಇವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ರಾಯಚೂರು ನಗರದ ನಿವಾಸಿಗಳಾಗಿದ್ದಾರೆ. ಬಂಧಿತರ ಪೈಕಿ ಗುರುಕುಮಾರ 307 ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನುಳಿದವರು ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನವುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪ್ರಕಾಶ ನಿಕ್ಕಿಂ ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ದತ್ತಾತ್ರೇಯ ಕಾರ್ನಾಡ್, ಪಿಎಸ್‍ಐಗಳಾದ ಸಿದ್ರಾಮ ಬಿದರಾಣಿ, ಸುಜಾತ ಸಿರವಾರ, ವೆಂಕಟೇಶ ಕವಿತಾಳ, ಎಸ್‍ಐ ವೀರನಗೌಡ, ಸಿಬ್ಬಂದಿಗಳಾದ ರಾಮಪ್ಪ, ರಮೇಶ, ಹುಸೇನ್‍ಸಾಬ್, ಗೋವಿಂದರಾಜ್, ಅಪ್ಜಲ್‍ಪಾಷ, ಚಾಂದ್‍ಪಾಷ, ನರಸಿಂಹ, ಮುಕ್ತಿಯಾರ್, ಡೇವಿಡ್, ದೇವರಾಜ್, ಪ್ರಕಾಶ, ಚರಣ್‍ರಾಜ್, ಶಾಂತಕುಮಾರ, ಅಜಿಮ್‍ಪಾಷ, ಡಾಕಪ್ಪ, ಗಂಗಪ್ಪ ಇದ್ದರು.

Share and Enjoy !

Shares