ವಿಜಯನಗರವಾಣಿಸುದ್ದಿ
ರಾಯಚೂರು ಜಿಲ್ಲೆ
ಮಾನ್ವಿ: ತಾಲೂಕಿನ ಆಧ್ಯಾತ್ಮಿಕ, ಧಾರ್ಮಿಕ, ದಾಸೋಹ ಸುಕ್ಷೇತ್ರ ಶ್ರೀ ರುದ್ರಮುನೀಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ರುದ್ರಮುನಿ ಮಹಾ ಸ್ವಾಮಿಗಳ ಉತ್ತರಾಧಿಕಾರಿಗಳಾಗಿ ಶ್ರೀ ಅನ್ನದಾನಿ ದೇವರು ಮಹಾಸ್ವಾಮಿಗಳ ಪುರ ಪ್ರವೇಶ ಸಮಾರಂಭ ಶುಕ್ರವಾರ ನಡೆಯಿತು.
ಬೆಳಿಗ್ಗೆ ಚೀಕಲಪರ್ವಿ ಗ್ರಾಮಸ್ಥರ ಪ್ರತಿ ಮನೆ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಗ್ರಾಮದ ಯುವತಿಯರು ಮಹಿಳೆಯರು ಅನ್ನದಾನಿ ದೇವರು ಮಹಾಸ್ವಾಮಿಗಳ ಪುರ ಪ್ರವೇಶ ಸಮಾರಂಭ ಅಂಗವಾಗಿ ಭಕ್ತಿಯ ಸಂಭ್ರಮ ಮನೆ ಮಾಡಿತ್ತು. ಕುಂಭ ಕಳಶ ದೊಂದಿಗೆ ಗ್ರಾಮ ಹೊರವಲಯದಿಂದ ಶ್ರೀಅನ್ನದಾನಿ ದೇವರ ಮಹಾಸ್ವಾಮಿಗಳನ್ನು ಸ್ವಾಗತ ಮಾಡಿಕೊಳ್ಳುವ ಮೂಲಕ ಡೋಳ್ಳು, ವಾದ್ಯಮೇಳದ ಮೂಲಕ ಅದ್ಧೂರಿ ಮೆರವಣಿಗೆಯೊಂದಿಗೆ ಗ್ರಾಮದ ಶ್ರೀ ರುದ್ರಮುನೀಶ್ವರ ಮಠಕ್ಕೆ ಕರೆತರಲಾಯಿತು.
ಶ್ರೀ ರುದ್ರಮುನಿ ಮಹಾಸ್ವಾಮಿಗಳವರ ಹಾಗೂ ವಿರೂಪಾಕ್ಷ ಮಹಾಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ ವಿಶೇಷ ಪೂಜೆಗಳ ನೆರವೆರಿಸಲಾಯಿತು.
ನಿರಂತರ ದಾಸೋಹಕ್ಕೆ ಹೆಸರುವಾಸಿಯಾದ ಶ್ರೀ ರುದ್ರಮುನೀಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ರುದ್ರಮುನಿ ಮಹಾ ಸ್ವಾಮಿಗಳ ಉತ್ತರಾಧಿಕಾರಿಗಳಾಗಿ ಶ್ರೀ ಅನ್ನದಾನಿ ದೇವರ ಪುರ ಪ್ರವೇಶವನ್ನು ನೋಡುಗರ ಕಣ್ಮನ ಸೇಳೆಯಿತು.
ಸಾಲು ಸಾಲು ಭಕ್ತರು ಚೀಕಲಪರ್ವಿ ಮಠಕ್ಕೆ ಹರಿದು ಬದರು.
ನಂತರ ಸಭಾ ಮಂಟಪದ ವೇದಿಕೆ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ರಾಯಚೂರು ಸಂಸದ ರಾಜಾಅಮರೇಶ್ವರ ನಾಯಕ ನಿರಂತರ ದಾಸೋಹ ಕ್ಕೆ ಹೆಸರುವಾಸಿಯಾದ ಚೀಕಲಪರ್ವಿ ಮಠಕ್ಕೆ ಸುದೀರ್ಘವಾದ ಇತಿಹಾಸವಿದ್ದು, ಅನೇಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಮೂಲಕ ಗುರು ಪರಂಪರೆಯನ್ನು ಎತ್ತಿಹಿಡಿದಿರುವದಿ ವಿಶೇಷವಾಗಿದೆ. ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ರುದ್ರಮುನಿ ಮಹಾ ಸ್ವಾಮಿಗಳ ನಿರಂತರ ಪರಿಶ್ರಮ ತ್ಯಾಗ ಎಲ್ಲಾರಿಗರ ಮಾದರಿಯಾಗಿದೆ. ಈ ಮಠಕ್ಕೆ ಉತ್ತರಾಧಿಕಾರಿಗಳಾಗಿ ಶ್ರೀ ಅನ್ನದಾನಿ ದೇವರ ಪುರ ಪ್ರವೇಶವನ್ನು ಸಮಾರಂಭದಲ್ಲಿ ನಾನು ಭಾಗವಹಿಸಿರುವದು ನನ್ನ ಪುಣ್ಯವಾಗಿದೆ. ಜಿಲ್ಲೆಯ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಅಭಿವೃದ್ಧಿಗೆ ಮಠಗಳ ಕಾರ್ಯ ದೊಡ್ಡದು ಎಂದರು. ನಂತರ ಶಾಸಕ ರಾಜಾವೆಂಕಟಪ್ಪ ನಾಯಕ ಮಾತನಾಡಿ, ಚೀಕಲಪರ್ವಿ ಮಠಕ್ಕೆ ಹಿರಿಯ ಶ್ರೀಗಳು ಕಿರೀಟ ಪ್ರಾಯವಾಗಿದ್ದು ಮಠದ ಪರಂಪರೆಯನ್ನು ಕಾಪಾಡುವ ಮೂಲಕ ಭಕ್ತರ ನಂಬಿಕೆ ಆಸೆಗಳಿಗೆ ಮಿಡಿಯುವವರಾಗಿದ್ದಾರೆ. ಅವರ ಅಭಿವೃದ್ಧಿಯ ಚಿಂತನೆಗಳು ಸದಾ ಕಾಲ ಮಾದರಿಯಾಗಿದೆ. ನಾನು ಶಾಸಕನಾಗಿ ಚೀಕಲಪರ್ವಿ ಮಠ ಮತ್ತು ಗ್ರಾಮದ ಅಭಿವೃದ್ಧಿ ಯ ಬಗ್ಗೆ ವಿಶೇಷ ಕಾಳಜಿ ಹೊಂದಿದೆನೆ ಎಂದರು. ನಂತರ ಮಾಜಿ ಶಾಸಕ ಜಿ.ಹಮಪಯ್ಯ ನಾಯಕ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಮಹಾಸ್ವಾಮಿ ವಹಿಸಿ ಮತನಾಡಿ, ಮಠದ ಗುರುಗಳ ಕಾರ್ಯವು ನಿಸ್ವಾರ್ಥ ಸೇವೆಯಾಗಿದೆ. ಯಾವುದೆ ಸ್ವಾರ್ಥತೆಯನ್ನು ಬಯಸದೆ ಭಕ್ತರ, ಸಮಾಜದ ಒಳತಿಗಾಗಿ ಶ್ರಮಿಸುವ ಕಾಯಕವಾಗಿದೆ. ಶ್ರೀ ಅನ್ನದಾನ ದೇವರು ಜೊತೆ ಅಭ್ಯಾಸ ಮಾಡಿ ಅವರನ್ನು ತುಂಭ ಅತ್ತಿರದಿಂದ ಕಂಡಿದ್ದೇನೆ ಅವರದು ತಾಯಿಯ ಮನಸ್ಸು, ಜ್ಞಾನವಂತರು ಎಂದರು.