ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಸಿರಗುಪ್ಪ: ಅರಣ್ಯಸಚಿವ,ಸಣ್ಣ ನೀರಾವರಿ ಹಾಗೂ ಕಾನೂನು ಸಚಿವ, ಸಂಸದರಿಂದನ. 23 ಸೋಮವಾರ ವಿವಿಧಕಾಮಗಾರಿಗಳ ಉದ್ಗಾಟನೆಗೆ ಆಗಮಿಸಲಿದ್ದಾರೆಂದು ಶಾಸಕಸೋಮಲಿಂಗಪ್ಪ ಅವರು ತಿಳಿಸಿದರು. ಶನಿವಾರ ಸಂಜೆ ನಡೆಸಿದಸುದ್ದೆಗೊಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ವಿವಿಧ ಗ್ರಾಮಗಳಲ್ಲಿನ ತುಂಗಭದ್ರಾ ನದಿಯಿಂದ ನಿರ್ಮಿಸಿದ ಏತ ನೀರಾವರಿ ಯೋಜನೆ ಮತ್ತು ನಗರದ ಎಪಿಎಂಸಿಯಲ್ಲಿ ಭತ್ತ ಖರೀದಿ ಕೇಂದ್ರದ ಉದ್ಘಾಟನೆಗೆ ಸಚಿವರಾದ ಸಣ್ಣ ನೀರಾವರಿ ಹಾಗೂ ಕಾನೂನು ಸಚಿವ ಮಾಧುಸ್ವಾಮಿ, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಮತ್ತು ಸಂಸದ ಕರಡಿ ಸಂಗಣ್ಣನವರು ನಾಳೆ ಸಿರುಗುಪ್ಪಕ್ಕೆ ಬರಲಿದ್ದು ತಾಲೂಕಿನ ತೆಕ್ಕಲಕೋಟೆ- ಉಡೇಗೋಳ ಗ್ರಾಮದ ಪರಿಶಿಷ್ಟ ಪಂಗಡ ರೈತರ ಸುಮಾರು 320 ಎಕರೆ ಪ್ರದೇಶಕ್ಕೆ ಎಸ್‍ಇಪಿ ಟಿಎಸ್‍ಪಿ ಯೋಜನೆಯಲ್ಲಿ 2ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಏತನೀರಾವರಿ ಯೋಜನೆಯ ಉದ್ಘಾಟನೆ. ತಾಲೂಕಿನ ತೆಕ್ಕಲಕೋಟೆ-ನಡಿವಿ ರೈತರ ಸುಮಾರು 550ಎಕರೆ ಪ್ರದೇಶದ ಏತನೀರಾವರಿಗೆ ಜಿಲ್ಲಾ ಖನಿಜ ನಿಧಿಯಡಿ 6.18ಕೋಟಿ ವೆಚ್ಚದ ಏತನೀರಾವರಿಯೋಜನೆಗೆ ಭೂಮಿ ಪೂಜೆ ನಡೆಯಲಿದೆ. ಅಲ್ಲದೆ ಹಳೇಕೋಟೆ ಗ್ರಾಮದ 350 ಎಕರೆ ಭೂಮಿಗೆ ಏತನೀರಾವರಿ, ತಾಲೂಕಿನ ಬಲಕುಂದಿ- ಮುದೇನೂರು ಗ್ರಾಮದ ಮಧ್ಯದ ವೇದಾವತಿ ಹಗರಿ ನದಿಗೆ 35ಕೋಟಿ ರೂ. ವೆಚ್ಚದ ಬ್ರಿಡ್ಜ್ ಕಂ.ಬ್ಯಾರೇಜ್ ನಿರ್ಮಾಣಕ್ಕೆ ಭೂಮಿ ಪೂಜೆ, ನೆನೆಗುದಿಗೆ ಬಿದ್ದಿರುವ ರಾರಾವಿ ಸೇತುವೆ, ನಗರದ ಕುಡಿಯುವ ನೀರಿನ ಕೆರೆ ಅತಿ ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ.ತುಂಗಭದ್ರ ಅಚ್ಚುಕಟ್ಟು ಪ್ರದೇಶದ ಭೂಮಿಗಳಿಗೆ ಹಿಂಗಾರು ಹಂಗಾಮಿನ ಬೆಳೆಗೆ ಯಾವುದೇ ನೀರಿನ ತೊಂದರೆಯಾಗುವುದಿಲ್ಲ. ಏ.15ರವರೆಗೆ ಕಾಲುವೆಗೆ ನೀರು ಬಿಡಲಾಗುವುದು. ಈಗಾಗಲೆ ಭತ್ತ ಬೆಳೆದ ರೈತರು ಬೆಂಬಲ ಬೆಲೆಯಿಲ್ಲದೆ ಸಂಕಷ್ಟದಲ್ಲಿರುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಗಂಡು ಖರೀದಿ ಕೇಂದ್ರವನ್ನು ತೆರೆಯಲು ನಿರ್ಧರಿಸಿದ್ದು, ಗ್ರೇಡ್-1ಗೆ 1880ರೂ., ಗ್ರೇಡ್-2ಗೆ 1850 ರೂ. ನಿಗದಿಸಿದ್ದು, ನ.30ರಿಂದ ಡಿ.31ರವರೆಗೆ ರೈತರು ಭತ್ತ ಮಾರಾಟ ಮಾಡಲು ನೋಂದಣಿ ಮಾಡಿಸಬೇಕು. ಜ.1ರಿಂದ ಜ.30ರವರೆಗೆ ಖರೀದಿ ಮಾಡಲಾಗುವುದು. ಒಬ್ಬ ರೈತನಿಂದ 40ಕ್ವಿಂಟಲ್ ಖರೀದಿಸಲು ಅವಕಾಶವಿದೆ. ಈ ಅವಕಾಶವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆನೀಡಿದರು. ಬಿಜೆಪಿ ತಾಲೂಕ ಘಟಕದ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.