ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂದು ನಡೆದ ೩೮ನೇ ವಾರ್ಷಿಕೋತ್ಸವದಲ್ಲಿ ಲಿಂಗಸ್ಗೂರಿನ ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಸುನಿತಾ ತಂ. ಅಮರೇಶ. ಅವರು ರಾಜ್ಯಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಕ್ಕಾಗಿ ಮಾಜಿ ಲೋಕಸಭಾ ಸದಸ್ಯರಾದ ದಿ.ಧರ್ಮರಾವ್ ಅಫಜಲಪೂರಕರ್ ಸ್ಮರಣಾರ್ಥ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ಈ ವಿದ್ಯಾರ್ಥಿನಿ ಅಪ್ರತಿಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸರೋಜಿನಿದೇವಿ ಆರ್.ಪಾಟೀಲ್,ಮತ್ತು ಪ್ರಾಚಾರ್ಯರಾದ ಬಸವರಾಜ ವೈ ಸರ್ ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ