ಅಖಿಲ ಕರ್ನಾಟಕ ಡಾ,ಜಿ,ಪರಮೇಶ್ವರ ಯುವಸೈನ್ಯ ತಾಲೂಕಾ ಘಟಕ ಅಸ್ತಿತ್ವಕ್ಕೆ.

Share and Enjoy !

Shares

 

  • ವಿಜಯನಗರವಾಣಿ ಸುದ್ದಿ
    ರಾಯಚೂರು ಜಿಲ್ಲೆ

ಮಸ್ಕಿ.ಸಂಘಟನೆಗಳು ಬೇರೆ ಬೇರೆಯಾಗಿದ್ದರೂ ಅವುಗಳ ಗುರಿಯೊಂದೇ.
ಅದು ಶೋಷಿತ ಸಮುದಾಯಗಳ ಹಿತರಕ್ಷಣೆ.
ಸಮಾಜದ ಸರ್ವಾಂಗೀಣ,ಸರ್ವೋತೋಮುಖ ಬೆಳವಣಿಗೆಗೆ , ಡಾ, ಬಾಬಾ ಸಾಹೇಬ್ ಅಂಬೇಡ್ಕರರ ಕನಸುಗಳನ್ನು ನನಸುಮಾಡೋ ದಿಸೆಯಲ್ಲಿ ಹೆಜ್ಜೆಗಳನ್ನು ಹಾಕುವ ಕೆಲಸ ನಮ್ಮಿಂದ ಆಗಬೇಕಾಗಿದೆ.
ಅದಕ್ಕಾಗೇ ಈ ಸಂಘಟನೆಯನ್ನು ಕಟ್ಟಿದ್ದೇವೆಂದು ಅಖಿಲ ಕರ್ನಾಟಕ ಡಾ,ಜಿ,ಪರಮೇಶ್ವರ ಯುವಸೈನ್ಯದ ರಾಜ್ಯಾಧ್ಯಕ್ಷ ನಗುತಾ ರಂಗನಾಥ ಹೇಳಿದರು.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ನೂತನ ತಾಲೂಕಾ ಘಟಕದ ರಚನೆಯ ಸಭೆಯಲ್ಲಿ ಅಂಬೇಡ್ಕರ್ ವೃತ್ತದ ಅಂಬೇಡ್ಕರರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು,
ಬಳಗಾನೂರಿನ ಅಣ್ಣಯ್ಯ ಭಂಡಾರಿ ಗುತ್ತಿಗೆದಾರರನ್ನು ಮಸ್ಕಿ ತಾಲೂಕಾ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.
ಅವರ ಹೆಗಲಿಗೆ ಹೆಗಲಾಗಿ ಎಲ್ಲರೂ ಒಗ್ಗಟ್ಟಾಗಿ ತಳಮಟ್ಟದಿಂದ ಸಂಘಟಿತರಾಗಿ.
ಧೀನ,ದಲಿತ,ಹಿಂದುಳಿದವರ್ಗದವರ ಶ್ರೇಯಾಭಿವೃದ್ದಿಗಾಗಿ ಶ್ರಮಿಸಲು, ಹಾಗೂ ಆ ಪ್ರಯತ್ನಕ್ಕೆ ರಾಜಕೀಯ ಶಕ್ತಿಯಾಗಿ ಇಂಬಾಗಿ ನಿಲ್ಲಲು,
ಜನಾನುರಾಗಿ ದಲಿತ ನಾಯಕ ಡಾ,ಜಿ,ಪರಮೇಶ್ವರರವರನ್ನು ಮುಖ್ಯಮಂತ್ರಿಗಳನ್ನಾಗಿಸಲು, ಕಂಕಣಬದ್ದರಾಗುವ ಉದ್ದೇಶದಿಂದ ಈ ಸಂಘಟನೆಯನ್ನು ಮಾಡಲಾಗಿದೆ ಎಂದರು.
ಇದೇ ವೇಳೆ ನೂತನ ಮಸ್ಕಿ ಘಟಕದ ತಾಲೂಕಾಧ್ಯಕ್ಷರಾಗಿ ನೇಮಕಗೊಂಡ ಬಳಗಾನೂರಿನ ಅಣ್ಣಯ್ಯ ಭಂಡಾರಿ ಮಾತನಾಡಿ ಎಲ್ಲರೂ ನನ್ನಮೇಲೆ ಬರವಸೆ ಇಟ್ಟು ಅಧ್ಯಕ್ಷನನ್ನಾಗಿ ಮಾಡಿ ದ್ದೀರಿ.
ಶಕ್ತಿಮೀರಿ ಪ್ರಯತ್ನಮಾಡಿ ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡುತ್ತೇನೆ.
ದಲಿತ ರಾಜಕಾರಣಿ, ಸದ್ದಿಲ್ಲದೇ ಸಾಧನೆ ಮಾಡುವ ಸಾತ್ವಿಕ ರಾಜಕಾರಣಿ, ಶೋಷಿತರ ಪರ ಮಿಡಿಯುವ ಹೃದಯದ, ದುಡಿಯುವ ಮನದ ಪ್ರಬುದ್ದರಾಜಕಾರಣಿ ಡಾ,ಜಿ,ಪರಮೇಶ್ವರರನ್ನು ಈ ರಾಜ್ಯದ ಮುಖ್ಯಮಂತ್ರಿಗಳನ್ನಾಗಿಸಲು ಹಗಲಿರುಳೆನ್ನದೇ ದುಡಿದು ತಳಸಮುದಾಯಗಳ ನೆಮ್ಮದಿಯ ನಾಳೆಗಳಿಗೆ ಕಾರಣರಾಗುವುದೇ ನಮ್ಮ ಗುರಿ ಎಂದರು.
ಡಾ,ಜಿ,ಪರಮೇಶ್ವರರವರು ದೂರವಾಣಿ ಕರೆ ಮಾಡಿ ನೂತನ ತಾಲೂಕಾಧ್ಯಕ್ಷ ಹಾಗೂ ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.
ನಂತರ ಚಲುವಾದಿ ಮಹಾಸಭಾದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಗಳಾಗಿರುವ ಮಲ್ಲಪ್ಪ ಗೋನಾಳ್ ನಮ್ಮ ಸಂಘಟನೆಗಳು ಬೇರೆಯಾಗಿದ್ದರೂ ಒಳ್ಳೆಯ ಉದ್ದೇಶಗಳಿಗಾಗಿ ಈ ಸಂಘಟನೆಯೊಂದಿಗೆ ಕೈಜೋಡಿಸಿ ನಾಡಿನ ಪ್ರಗತಿಗಾಗಿ ಶ್ರಮಿಸುತ್ತೇವೆಂದು ನುಡಿದರು.
ಈ ಸಂದರ್ಭದಲ್ಲಿ
ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ ಯುವ ಸೈನ್ಯದ ಜಿಲ್ಲಾ ಅಧ್ಯಕ್ಷ ರಾದ ಮಲ್ಲರೆಡ್ಡಪ್ಪ, ಎಚ್ ದೊಡ್ಡ ಮನಿ , ಮೈಸೂರು ಮಂಜು ,ಹಾಗೂ ಕೋಟೆಮಂಜು, ಹನುಮೇಶ್ ನಾಯಕ ಬಳಗಾನೂರು, ಪದಾಧಿಕಾರಿಗಳು ಹಾಗೂ ಹೋರಾಟಗಾರರಾದ ಮಲ್ಲಪ್ಪ ಗೋನಾಲ್ ಹುಸೇನಪ್ಪ ದಾರಿಮನಿ,ಸುರೇಶ್ ಬಸಾಪೂರು ಇದ್ದರು.

Share and Enjoy !

Shares