ವಿಜಯನಗರವಾಣಿ
ರಾಯಚೂರು ಜಿಲ್ಲೆ
ಮಸ್ಕಿ : ಕಾಂಗ್ರೆಸ್ವ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಸಾವಿರಾರು ಜನರ ಕಾಲಿಗೆರಗಿ ಸಾಷ್ಟಾಂಗ ನಮಸ್ಕಾರ ಮಾಡಿ ಮತ ಭಿಕ್ಷೆ ಬೇಡಿದ ಆರ್ ಬಸನಗೌಡ ತುರವಿಹಾಳ ಎಲ್ಲರ ಗಮನ ಸೆಳೆದರು.
ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ನಂತರ ಮಾತನಾಡಿದ ಆರ್ ಬಸನಗೌಡ ನಿಮ್ಮೆಲ್ಲ ಆಶೀರ್ವಾದದಿಂದ ನಮ್ಮ ರಾಜ್ಯ ನಾಯಕರ ಬೆಂಬಲದಿಂದ ನನ್ನನ್ನ ಈ ಬಾರಿ ಗೆಲ್ಲಿಸಿಕೊಡಿ ನಿಮ್ಮ ಸೇವಕನಾಗಿ ಕೆಲಸ ಮಾಡುವೆ, ನನಗೆ ಹಾಗೂ ನನ್ನ ಬೆಂಬಲಿಗರಿಗೆ ಪ್ರತಾಪ ಗೌಡ ಅನ್ಯಾಯ ಮಾಡಿದ್ದಾರೆ ನಮ್ಮ ಬೆಂಬಲಿಗರಿಗೆ ನ್ಯಾಯ ಕೊಡುವ ಉದ್ದೇಶದಿಂದ ಮತ್ತು ಮಸ್ಕಿ ಕ್ಷೇತ್ರ ಅಭಿವೃದ್ದಿಗಾಗಿ ನಾನು ಈ ಚುನಾವಣೆ ಮಾಡುತ್ತಿದ್ದೇನೆ ಅದಕ್ಕಾಗಿ ನಿಮ್ಮೆಲ್ಲರ ಪಾದಗಳಿಗೆ ನಮಸ್ಕಾರ ಮಾಡಿ ಬೇಡಿಕೊಳ್ಳುತ್ತೇನೆ ನನ್ನನ್ನ ಈ ಬಾರಿ ಗೆಲ್ಲಿಸಿ ಕೊಡಿ ಎಂದು ತಿಳಿಸಿದರು.
ಭಾಷಣ ಮುಗಿಸಿ ವೇದಿಕೆಯ ಮೇಲೆ ನೆರೆದಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತ ರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ನೇರೆದವರೆಲ್ಲಾರ ಮನ ಗೆದ್ದು ಸಭೆಗೆ ವಂದಿಸಿದರು.