ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸುಗೂರು: ತಾಲ್ಲೂಕಿನ ಹಲ್ಕಾವಟಗಿ ಗ್ರಾಮದಲ್ಲಿ
ಕಾರ್ಯಕ್ರಮದ ಉದ್ಘಾಟನೆಯನ್ನು ನಿಂಗಮ್ಮ ಆದಪ್ಪ ತಾಲೂಕು ಪಂಚಾಯಿತಿ ಸದಸ್ಯರು ನೆರವೇರಿಸಿದರು. *ಅಂಬರೀಶ ಛಲವಾದಿ ಕಮಲದಿನ್ನಿ ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿ* ಅವರು
*ಸಂವಿಧಾನ ಮತ್ತು ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ* ಸವಿನೆನಪಿಗಾಗಿ ಸರ್ಕಾರ ನವೆಂಬರ್ 26 ರಂದು *”ಸಂವಿಧಾನ ದಿನ”* ಆಚರಣೆ ಮಾಡಲಾಗುತ್ತದೆ. ಇದರ ಉದ್ದೇಶ ಎಲ್ಲಾ ಭಾರತೀಯ ಜನಸಾಮಾನ್ಯರಿಗೂ, ನಾಗರಿಕರಿಗೂ ಸಂವಿಧಾನದ ಬಗ್ಗೆ ಮತ್ತು ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ತಿಳಿಸುವ ಆಸೆಯಿಂದ ಈ ಕಾರ್ಯಕ್ರಮ ಮಾಡಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ವಾಗಲಿ ಅಥವಾ ರಾಜ್ಯ ಸರ್ಕಾರ ವಾಗಲಿ, ಈ ಕಾರ್ಯಕ್ರಮ ಮಾಡುತ್ತಿಲ್ಲ.
ಈ ಕಾರ್ಯಕ್ರಮವನ್ನು ಅಂದರೆ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ZEE Kannada ವಾಹಿನಿಯಲ್ಲಿ ಧಾರಾವಾಹಿ ಮೂಲಕ ಎಲ್ಲರಿಗೂ ತಿಳಿಸುವಂತಹ ಕೆಲಸ ಮಾಡುತ್ತಿದೆ. ಅದಕ್ಕಾಗಿ ಆ ವಾಹಿನಿಗೆ ಈ ಕಾರ್ಯಕ್ರಮದ ಮೂಲಕ ಧನ್ಯವಾದಗಳು ಸಲ್ಲಿಸುತ್ತೆನೆ ಎಂದು ಜೈ ಭೀಮ್ ನಮನಗಳು ಸಲ್ಲಿಸಿದರು.
ಮತ್ತು ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ ಲಿಂಗಸುಗೂರು ತಾಲ್ಲೂಕ ಅಧ್ಯಕ್ಷರು ಅನೀಲಕೂಮಾರ, ಅಂಬೇಡ್ಕರ್ ಸೇನೆಯ ಕಾರ್ಯಾಧ್ಯಕ್ಷ ಗದ್ದಪ್ಪ ಚಿತ್ತಾಪೂರ, ಶರಣಪ್ಪ ಕಟ್ಟಿಮನಿ ಮುದಗಲ್, ಹನುಮಂತ ಚಲವಾದಿ ಹಲ್ಕಾವಟಗಿ, ಪರುಶುರಾಮ ಹಲ್ಕಾವಟಗಿ, ಹೊನ್ನಪ್ಪ ಪಲದಿನ್ನಿ, ಭಾಗವಹಿಸಿದ್ದರು. ಮುತ್ತು ಹಲ್ಕಾವಟಗಿ ಕಾರ್ಯಕ್ರಮದ ನಿರೂಪಣೆ ಮಾಡಿದರು.