ರಾಯಚೂರು:ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ ರವನ್ನು ಸಚಿವ ಸಂಪುಟದಲ್ಲಿ ವಜಾ ಮಾಡಿರುವುದರ ವಿರುದ್ಧ ಯುವ ಕುರುಬ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಅಯ್ಯಪ್ಪ ಗಬ್ಬೂರು ಅವರು ಖಂಡಿಸಿದ್ದಾರೆ.
ಹಿಂದುಳಿದ ವರ್ಗದ ನೌಕರರನ್ನು ಗುರಿಯಾಗಿಸಿಕೊಂಡಿರುವುದು ಸರಿಯಲ್ಲ. ಹಿರಿಯ ಅಧಿಕಾರಿಗಳ ಮಾತು ಕೇಳಿ ಸರಕಾರ ಈ ರೀತಿ ಕ್ರಮ ಕೈಗೊಳ್ಳಬಾರದು. ಕೂಲಂಕುಷವಾಗಿ ಚರ್ಚಿಸಬೇಕಿತ್ತು. ಉನ್ನತ ಅಧಿಕಾರಿಗಳು ಹೇಳಿದ ಮಾತ್ರಕ್ಕೆ ಅದನ್ನು ಸತ್ಯವೆಂದು ನಂಬಿ ಸರಕಾರ ತೀರ್ಮಾನ ಕೈಗೊಳ್ಳಬಾರದು ಕೂಲಂಕುಷವಾಗಿ ಚರ್ಚಿಸಬೇಕಿತ್ತು ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ಕೋಟಿಗಟ್ಟಲೆ ಸರಕಾರದ ಹಣವನ್ನು ರಾಜಾರೋಷವಾಗಿ ಕೊಳ್ಳೆಹೊಡೆಯುತ್ತಿರುವ ಅಧಿಕಾರಿಗಳಿದ್ದಾರೆ.ಆದರೆ ಒಬ್ಬ ನಿಷ್ಠಾವಂತ ಅಧಿಕಾರಿಯನ್ನು ಅದರಲ್ಲಿಯೂ ಹೈಕೋರ್ಟಿನಿಂದ ತಡೆ ತಂದಿದ್ದರು ಕೂಡ ಅದನ್ನು ಲೆಕ್ಕಿಸದೆ ಸರಕಾರ ವಜಾ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎನ್ನುವುದು ಗೊತ್ತಾಗುತ್ತಿಲ್ಲ. ಈ ನಿರ್ದಾರ ನೋಡಿದರೆ ಇವರುಗಳಿಗೆ
ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲದಂತಾಗುತ್ತದೆ.
ಸರಕಾರ ವಜಾ ಆದೇಶವನ್ನು ಹಿಂಪಡೆದು ಉಪಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸುವಂತೆ ಆದೇಶಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು .