ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು: ಕರವೇ ಕಾರ್ಯಾಲಯದಲ್ಲಿ ಎಲ್ಲಾ ತಾಲೂಕು ಘಟಕ ಪದಾಧಿಕಾರಿಗಳು ನಗರ ಘಟಕ ಅಧ್ಯಕ್ಷರು ಹಾಗೂ ಗ್ರಾಮ ಘಟಕ ಅಧ್ಯಕ್ಷರು ಪದಾಧಿಕಾರಿಗಳ ಸಭೆ ಕರೆದಿದ್ದು ಈ ಸಭೆಯಲ್ಲಿ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವುದರ ವಿರೋಧಿಸಿ ಮತ್ತು 50 ಕೋಟಿ ರೂಪಾಯಿ ಅನುದಾನವನ್ನು ಆರ್ಥಿಕ ಇಲಾಖೆಯಾ ಮೀಸಲಿಡುವಂತೆ ಆದೇಶವನ್ನು ಹಿಂದೆ ಪಡೆಯುವಂತೆ ದಿನಾಂಕ:- 05 /12/2020/ ರಂದು ನಡೆಯಲಿರುವ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಹೋರಾಟಕ್ಕೆ ರಾಜ್ಯ ಅಧ್ಯಕ್ಷರಾದ ಟಿ.ಎ.ನಾರಯಣ ಗೌಡ ಆದೇಶ ಮೇರೆಗೆ ಕರ್ನಾಟಕ ಬಂದ್ ಕರೆಗೆ ನಮ್ಮ ಬೆಂಬಲವಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ಶ್ರೀ ಜಿಲಾನಿ ಪಾಶಾ ಇವರು ಎಲ್ಲಾ ಗ್ರಾಮಘಟಕ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸಭೆ ಕರೆದು ಹೋರಾಟಕ್ಕೆ ಆಗಮಿಸಬೇಕೆಂದು ಸಭೆಯಲ್ಲಿ ತಿರ್ಮಾನಿಸಲಾಯಿತು. ದಿನಾಂಕ 05/12/2020 ರಂದು ಕನ್ನಡಪರ ಸಂಘಟನೆಗಳು ಒಕ್ಕೂಟ ನಡೆಸುವ ಕರ್ನಾಟಕ ಬಂದ್ ಗೆ ನಮ್ಮ ಸಂಘಟನೆಯ ಬೆಂಬಲ ಇದೆ ಎಂದು ತಿಳಿಸಿದರು