ಹಟ್ಟಿ ಚಿನ್ನದ ಗಣಿ ನೂತನ ಅಧ್ಯಕ್ಷರಿಗೆ ತಾಲ್ಲೂಕು ಹೂಗಾರ ಸಮಾಜದ ವತಿಯಿಂದ ಸನ್ಮಾನ.

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸ್ಗೂರು : ದೇಶದಲ್ಲಿಯೇ ಚಿನ್ನದ ನಾಡು ಎಂದು ಪ್ರಖ್ಯಾತಿ ಪಡೆಯುವುದಕ್ಕೆ ಕಾರಣವಾಗಿರುವ, ತಾಲ್ಲೂಕಿನ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿಯ ನೂತನ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕಗೊಂಡಿರುವ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಲಿಂಗಸ್ಗೂರು ತಾಲ್ಲೂಕು ಹೂಗಾರ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ‌
ತಾಲ್ಲೂಕು ಹೂಗಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಪ್ಪ ಹೂಗಾರ್ ನೇತೃತ್ವದಲ್ಲಿ ವಜ್ಜಲ್ ರ ನಿವಾಸಕ್ಕೆ ತೆರಳಿದ ಸಮಾಜದ ಮುಖಂಡರು ಚಿನ್ನದ ಗಣಿಯ ನೂತನ ಅಧ್ಯಕ್ಷರಿಗೆ ಗೌರವ ಪೂರ್ವಕವಾಗಿ ಶಾಲು, ಹಾರ ಹಾಕಿ, .ಮೈಸೂರು ಪೇಟ ತೊಡಿಸಿ ಸತ್ಕರಿಸಿದರು.
ಈ ವೇಳೆ ಸಮಾಜದ‌ ಮುಖಂಡರಾದ ವೀರಭದ್ರಪ್ಪ ಹೂಗಾರ್, ಹನುಮಂತ ಹೂಗಾರ್, ಬಸವರಾಜ್ ಹೂಗಾರ್, ನಾಗರಾಜ್ ಹೂಗಾರ್, ಶರಣಬಸವ ಹೂಗಾರ್, ಗುರುಗುಂಟಾ, ಮಂಜುನಾಥ್ ಹೂಗಾರ್ ಹುನಕುಂಟಿ. ಶ್ರೀಮತಿ ಶಾಂತಮ್ಮ ಹೂಗಾರ್ ಮುದಗಲ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares