ಎನ್ ಆರ್ ಬಿ ಸಿ.೫ ಎ. ಹೋರಾಟ ೧೪ ನೆಯ ದಿನ ಮುಂದುವರಿಕೆ ಪಟ್ಟು ಬಿಡದ ರೈತರು

Share and Enjoy !

Shares
Listen to this article

 

ವಿಜಯನಗರವಾಣಿ
ರಾಯಚೂರು ಜಿಲ್ಲೆ:ಮಸ್ಕಿ ತಾಲ್ಲೂಕಿನ ಪಾಮನಕಲ್ಲುರು ಗ್ರಾಮದ ಹೊರ ಹೊಲಯದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಎನ್ ಆರ್ ಬಿ ಸಿ ೫ ಎ. ಹೋರಾಟಗಾರರ ಅನಿರ್ದಿಷ್ಟ ಅವಧಿ ಧರಣಿ ಇಂದು ೧೪ ನೆಯ ದಿನ ಮುಂದುವರೆಸಿದ್ದು , ಕರ್ನಾಟಕ ನೀರಾವರಿ ಸಂಘ ದ ಅಧ್ಯಕ್ಷ ಬಸವರಾಜಪ್ಪ ಗೌಡ ಹರ್ವಾಪೂರಾ ಮಾತನಾಡಿ
ನಮ್ಮ ಹೋರಾಟ ನಿರಂತರವಾಗಿ ನಮ್ಮ ಗುರಿ ಮುಟ್ಟುವವರೆಗೆ ನಿಲ್ಲದು , ಗುರುವಾರ ಹುವೀನ ಬಾವಿ ಗ್ರಾಮದ ರೈತರು ಭಾಗವಹಿಸಿದ್ದು ವಿಶೇಷವಾಗಿತ್ತು. ಅಲ್ಲಿ ಬರೀ ಹೂವಿನ ಬಾವಿ ರೈತರಲ್ಲದೇ ಬೇರೆ ಬೇರೆ ಗ್ರಾಮದ ಅನೇಕ ರೈತರು ಸ್ವ ಇಚ್ಛೆಯಿಂದ ಭಾಗವಹಿಸಿದ್ದು ಇನ್ನೂ ವಿಶೇಷವಾಗಿತ್ತು. ನಾವೆಲ್ಲರೂ ಒಗ್ಗಟ್ಟಿನಿಂದ ಹೊರಾಡಿದಲ್ಲಿ ಜಯ ನಿಶ್ಚಿತ ,ನಾವೆಲ್ಲರೂ ಸೇರಿ ನಮ್ಮ ಹೋರಾಟದ ರೂಪುರೇಷೆಗಳನ್ನು ಬದಲಿಸುವುದ ರ ಕುರಿತು ಚರ್ಚೆ ಮಾಡೋಣ ಎಂದು ತಿಳಿಸಿದರು.
ಕರ್ನಾಟಕ ನೀರಾವರಿ ಸಂಘ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಚಿಲ್ಕರಾ ಗಿ ವ್ಹೀಲ್ ಚೇರ್ ಸಮೇತ ಧರಣಿ ಸ್ಥಳದಲ್ಲಿ ನಿರಂತರವಾಗಿ ಭಾಗಿಯಾಗಿದ್ದು ರೈತರಿಗೆ ಸ್ಫೂರ್ತಿಯಾಗಿದೆ , ಆನಂದಗಲ್ ಪೂಜ್ಯರು ಭಾಗವಹಿಸಿ ರೈತರಿಗೆ ಹಿತವಚನ ಹೇಳಿದರು. ಸುತ್ತಲಿನ ಗ್ರಾಮದ ರೈತ ಮಹಿಳೆಯರು ತಮ್ಮ ಮನೆಯ ಕೆಲಸಗಳನ್ನು ಬದಿಗಿಟ್ಟು ಭಾಗವಹಿಸಿದ್ದರು.
ಆದರೆ
ಇದೇ ಸಂದರ್ಭದಲ್ಲಿ ಮಾತನಾಡಿದ ೫ ಎ ನಾಲಾ ಯೋಜನೆ ಹೋರಾಟ ಸಮಿತಿ ಮುಖ್ಯಸ್ಥ ಶಿವನಗೌಡ ವಟಗಲ್ ನಮ್ಮ ಹೋರಾಟದ ರೂಪುರೇಷೆಗಳು ಬದಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಬದಲಾವಣೆಗಳೊಂದಿಗೆ ಹೋರಾಟ ನಿರಂತರ ವಾಗಿ ನಡೆಯುತ್ತದೆ, ಕೆಲ ದಿನಗಳ ಹಿಂದೆ ಧರಣಿ ಸ್ಥಳಕ್ಕೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಹಾಗೂ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹಾಗೂ ಅನೇಕ ಸಂಸದರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದ್ದು ಅವರು ೧೫ ದಿನಗಳ ಕಾಲಾವಕಾಶ ಕೇಳಿದ್ದರು ಅದರಂತೆ ನಮ್ಮ ರೈತರು ಕಾದು ನೋಡೋಣ ಒಳ್ಳೆಯ ಸುದ್ದಿ ನಿರೀಕ್ಷೆ ಮಾಡೋಣ ಎಂದು ಭರವಸೆಯ ಮಾತುಗಳನ್ನು ತಿಳಿಸಿದರು.
ಕ ನೀ ಸಂಘ ದ ಮುಖಂಡ ನಾಗರೆಡ್ಡೆಪ ದೇವರಮನಿ ಮಾತನಾಡಿ ರೈತರು ನಮ್ಮ ಗುರಿ ಮುಟ್ಟುವವರೆಗೆ , ಹೋರಾಟ ಗೆಲ್ಲುವವರೆಗೂ ಎದೆಗುಂದದೆ ಶಾಂತಿಯುತವಾಗಿ ಹೋರಾಟ ಮಾಡೋಣ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಯಾವುದೇ ಕಾರಣಕ್ಕೂ ನಾವು ಭರವಸೆ ಕಳೆದುಕೊಳ್ಳದೆ ಧರಣಿ ಮುನ್ನಡೆ ಸೋಣ ಎಂದು ರೈತರಿಗೆ ಸ್ಪೂರ್ತಿದಾಯಕ ಮಾತನ್ನಾಡಿದರು.
ಇದೇ ಸಂದರ್ಭದಲ್ಲಿ ಕ ನೀ ಸಂಘದ ಎಲ್ಲಾ ಮುಖಂಡರು, ಪಾಮನಕಲ್ಲುರ ಹಾಗೂ ಸುತ್ತಲಿನ ಗ್ರಾಮದ ರೈತರು ಹಾಗೂ ಹೂವಿನ ಬಾವಿ ಗ್ರಾಮದ ಅನೇಕ ರೈತರು ಧರಣಿಯಲ್ಲಿ ಭಾಗವಹಿಸಿದ್ದರು

Share and Enjoy !

Shares