ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ . ರೈತರ ಬೆನ್ನೆಲುಬು ಮುರಿಯಲು ಪ್ರಯತ್ನ ಖಂಡನೀಯ:ಸಂತೋಷ ಹೀರೆ ದಿನ್ನಿ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಮಸ್ಕಿ : ಪಟ್ಟಣದ ಅಂಬೇಡ್ಕರ್ ಪುತ್ತಳಿಯ ಮುಂದೆ ಕರ್ನಾಟಕ ರೈತ ಸಂಘ ಮಸ್ಕಿ ತಾಲ್ಲೂಕು ವತಿಯಿಂದ
ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ಮಾಡಿದರು.
ಈ ವೇಳೆ. ಕರ್ನಾಟಕ ರೈತ ಸಂಘದ ಮಸ್ಕಿ ತಾಲೂಕಾಧ್ಯಕ್ಷ ಸಂತೋಷ ಹಿರೇದಿನ್ನಿ ಮಾತನಾಡಿ
ಬಹುರಾಷ್ಟ್ರೀಯ ಕಂಪನಿಗಳ ಏಜೆಂಟನಂತೆ ವರ್ತಿಸುತ್ತಿದೆ.
ಆ ಸರಕಾರಕ್ಕೆ ರೈತರ ಹಿತಕ್ಕಿಂತ ಕಾರ್ಪೋರೇಟ್ ವಲಯದ ಹಿತವೇ ಮುಖ್ಯವಾಗಿದೆ.
ಪಂಜಾಬ್ ದ ರೈತರು ದೆಹಲಿಗೆ ಹೋಗಲು ಸರಕಾರದ ಆಸ್ತಿಯನ್ನು ಸ್ವತಹ ಪೊಲೀಸರೇ ಹಾಳು ಮಾಡಿ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಖಂಡನಾರ್ಹವೆಂದು ಆಕ್ರೋಶವ್ಯಕ್ತಪಡಿಸಿದರು.
ದಿಡೀರನೆ ಪ್ರತಿಭಟನೆಗಿಳಿದು ರಸ್ತೆ ರೋಕೋ ಆರಂಭಿಸಿದ ರೈತಸಂಘದ ಹೋರಾಟಗಾರರನ್ನು ಪಿ,ಎಸ್,ಐ, ಸಣ್ಣ ಈರೇಶ ಮತ್ತು ಆರಕ್ಷಕರು ತಡೆಯಲು ಮುಂದಾದಾಗ ಹೋರಾಟಗಾರರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ರಾಜಕೀಯ ಮುಖಂಡರು ಮೆರವಣಿಗೆ ಮಾಡಲು ತಾಸುಗಟ್ಟಲೆ ರಸ್ತೆ ಬಂದ್ ಮಾಡಿದರೆ ಪರವಾಗಿಲ್ಲ ರೈತರ ಉಳಿವಿಗಾಗಿ ಹೋರಾಟಮಾಡಲು ರಸ್ತೆಗಿಳಿದರೆ ನಿಮಗೆ ಆಗುವದಿಲ್ಲವಲ್ಲ
ಇದೆ ವೇಳೆ ರೈತ ಮುಖಂಡರಾದ ಬಿ,ಎನ್,ಹೆರ್ದಾಳ್
ರೈತರ ಮರಣ ಶಾಸನಗಳ ಆಗಿರುವ ಭೂಸುಧಾರಣಾ ಕಾಯ್ದೆ, ಎ,ಪಿ,ಎಮ್,ಸಿ, ಕಾಯ್ದೆ,ಹಾಗೂ ವಿದ್ಯುತ್ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು.
ದೆಹಲಿಹೋರಾಟಕ್ಕೆ ತೆರಳಿರುವ ರೈತರನ್ನು ದುರುದ್ದೇಶದಿಂದ ತಡೆದು ಅನ್ನದಾತನಿಗೆ ಅವಮಾನಮಾಡುವದಷ್ಟೇ ಅಲ್ಲದೆ ರೈತರ ಸಾವಿಗೆ ಕಾರಣವಾಗುತ್ತಿದೆ.
ಇಂತಹ ದರ್ಪಿಷ್ಟ ಸರಕಾರವನ್ನು ರೈತರು ಕ್ಷಮಿಸುವದಿಲ್ಲ ದೆಹಲಿಯ ಹೋರಾಟ ಯಶಸ್ವಿಯಾಗಲು ನಮ್ಮ ಸಂಘಟನೆ ಶಕ್ತಿಮೀರಿ ಹೋರಾಡುತ್ತದೆ. ಸರಕಾರ ತನ್ನ ಉದ್ದಟತನವನ್ನು ಹೀಗೆ ಮುಂದುವರೆಸಿದರೆ ಇಡೀ ದೇಶಕ್ಕೆ ದೇಶವೇ ಹೊತ್ತಿ ಉರಿಯಲಿದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ. ಚಿಟ್ಟಿಬಾಬು, ಮಾರುತಿ ಜಿನ್ನಾಪೂರು, ಸಂತೋಷ ಹಿರೇದಿನ್ನಿ, ನಾಗಪ್ಪ ತಳವಾರ್,ಹುಲುಗಪ್ಪ, ಶರಣಪ್ಪಗೌಡ ಚಿಲಕರಾಗಿ, ಮುಂತಾದವರು ಭಾಗವಹಿಸಿದ್ದರು

Share and Enjoy !

Shares