ಸಂಭ್ರಮ ಸಡಗರದ ಕನಕದಾಸರ 553ನೇ ಜಯಂತ್ಯೋತ್ಸವ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು :ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ ಎಂದು ಜಗತ್ತಿಗೆ ಸಾರಿದ ದಾಸರಲ್ಲಿಯೇ ಅತ್ಯಂತ ಶ್ರೇಷ್ಠರಾದ ಕನಕದಾಸರ 553ನೇ ಜಯಂತ್ಯೋತ್ಸವವನ್ನು ನಾಡಿನಾಧ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಲಿಂಗಸೂಗೂರು ತಾಲ್ಲೂಕಿನ ಐದನಾಳ ಗ್ರಾಮದಲ್ಲಿಯೂ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗುರುವಾರ ಬೆಳಿಗ್ಗೆ ಲಿಂಗಸೂಗೂರು ತಾಲ್ಲೂಕಿನ ಐದನಸಳ ಗ್ರಾಮದ ಕನಕದಾಸ ಸಂಘಟನೆಗಳ ಆಶ್ರಯದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ಕನಕದಾಸರ ಫೋಟೋಕ್ಕೆ ಗ್ರಾಮದ ಯುವಕರು ಕನಕದಾಸ ಯುವಕ ಸಂಘ ಮತ್ತು ರಂಗ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ದಿ
ಸೇರಿ ಹಲವು ಗಣ್ಯರು ಪೂಜೆ ಮತ್ತು ಮಾಲಾರ್ಪಣೆ ಮಾಡುವ ಮೂಲಕ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿದರು.
ಮಹಾಮಾರಿ ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಕನಕದಾಸರು ಜಾತಿ ಬೇಧವನ್ನು ತೊಡೆದು ಹಾಕಲು ಶ್ರಮಿಸಿದ ಮಹಾ ಪುರುಷರು. ತಮ್ಮ ಕೀರ್ತನೆ ಸಾಹಿತ್ಯದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಆದ್ರೆ ಇದುವರೆಗೂ ಜಾತೀಯತೆಯನ್ನು ತೊಡೆದು ಹಾಕಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ..ಹುಚ್ಚಪ್ಪ ಆನೆಹೊಸೂರು ಬಸವರಾಜ್ ಕಕ್ಕೇರಿ ಬಸವರಾಜ್ ಕಕ್ಕೇರಿ ಪೂಜೇರಿ ಶಂಕ್ರಪ್ಪ ಬೀರಪ್ಪ ಶಿವನಗುತ್ತಿ ಈರಪ್ಪ ಮಾಳಮನ್ವರ ಬೀರಪ್ಪ ಬಟಾಳ್ಳಿ ಇತರರು ಇದ್ದರು

Share and Enjoy !

Shares