ಕಂದಾಯ ಇಲಾಖೆ‌ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Share and Enjoy !

Shares
Listen to this article

 

ಬಳ್ಳಾರಿ, ಡಿ.5: ವಿಮ್ಸ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಗರದ ವಿಮ್ಸ್ ಬಿಸಿ ರಾಯ್ ಸಭಾಂಗಣದಲ್ಲಿ ಶನಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ ಅವರು
ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ವತಃ ಅವರೇ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರು.
ವಿಮ್ಸ್ ನಿರ್ದೇಶಕ ಡಾ.ದೇವಾನಂದ್, ಸಹಾಯಕ ಆಯುಕ್ತ ‌ರಮೇಶ ಕೋನರೆಡ್ಡಿ, ವಿಮ್ಸ್ ಅಧೀಕ್ಷಕ ಡಾ. ಮರಿರಾಜ್, ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಎ.ಶಕೀಬ್, ತಹಸೀಲ್ದಾರ್ ರೆಹಮಾನ್ ಪಾಶಾ ಮತ್ತಿತರು ಇದ್ದರು.
ಕಂದಾಯ ಇಲಾಖೆಯ 150ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ‌‌ ವಿಮ್ಸ್ ನ ನುರಿತ ತಜ್ಞ ವೈದ್ಯರು ತಪಾಸಣೆ ನಡೆಸಿದರು ಮತ್ತು ಅಗತ್ಯ ಔಷಧಿಗಳನ್ನು ವಿತರಿಸಿದರು.
ಸರ್ವ್ ಸ್ವಯಂಸೇವಕರಾದ ಹರಿಶಂಕರ್, ಪವನ್,ವಾಸು,ಭಾಷಾ,ರಫೀಕ್‌ ಹಾಗೂ ವಿಮ್ಸ್ ಸಿಬ್ಬಂದಿ ಸೇರಿದಂತೆ ಅನೇಕರು ಇದ್ದರು.

Share and Enjoy !

Shares