ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು : ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ರಚನೆ ಮಾಡಲು ಮುಂದಾಗಿರುವ ಸರ್ಕಾರ ಕನ್ನಡಿಗರ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಮತ್ತು ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಐತಿಹಾಸಿಕಪ್ರಸಿದ್ಧ ರಾಯಚೂರು ಜಿಲ್ಲೆಯ ಲಿಂಗಸುಗೂರುತಾಲೂಕಿನ ಮುದಗಲ್ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಸ್ ನಿಲ್ದಾಣದ ವೃತ್ತದಿಂದ ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಾ ಉಪ ತಹಸೀಲ್ದಾರ್ ಕಾರ್ಯಾಲಯದ ವರೆಗೆ ಪ್ರತಿಭಟನಾ ರಾೄಲಿ ಮಾಡಿದರು. ನಂತರ ಕ. ರ. ವೇ. ಅಧ್ಯಕ್ಷ ಎಸ್.ಎ.ನಯೀಮ್ ಅವರ ನೇತೃತ್ವದಲ್ಲಿ ಉಪ ತಹಸೀಲ್ದಾರ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಮುಂದಾದರು.
ಈ ವೇಳೆ ಪಿಎಸೈ ಡಾಕೇಶ್ ಹಾಗು ಸಿಬ್ಬಂದಿ ಯವರು ಕರವೇ ಕಾರ್ಯಕರ್ತರನ್ನು ತಡೆದರು
ಉಪತಹಶೀಲ್ದಾರ ನಾಗರಾಜ ರವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು…
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ S.N ಖಾದ್ರಿ,
ಸಾಬು ಹುಸೇನ್,
ನಾಗರಾಜ್
ಸಾಬೀರ್,ವಿರುಪಾಕ್ಷಿ ಹೂಗಾರ್, ಅಮೀನ್ ಸಾಬ್ ನಧಾಪ್ ಮಹಾಂತೇಶ್,ತಿಮ್ಮನಗೌಡ,
ಹನೀಫ್ ಖಾನ್,ಅವೇಜ ಪಾಶ,
ರಹೆಮಾನ್ ಧೂಲಾ, ಯಮನೂರ ನಾಯಕ, ಭೀಮಣ್ಣ ಉಪ್ಪಾರ,
ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು