ವಿದ್ಯಾರ್ಥಿಗಳ ಭವಿಷ್ಯದ ಬೆಳ್ಳಿ ಕಿರಣ; ಜವಾಹರ ನವೋದಯ ವಿದ್ಯಾಲಯ; ಪ್ರವೇಶಕ್ಕೆ ಡಿ.15 ಕೊನೆಯ ದಿನ

Share and Enjoy !

Shares
Listen to this article

 

ಧಾರವಾಡ ಡಿ.05: ದೇಶದಾದ್ಯಂತ 27 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜವಾಹರ ನವೋದಯ ವಿದ್ಯಾಲಯಗಳು ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳ ಪಾಲಿನ ಭವಿಷ್ಯದ ಬೆಳ್ಳಿಕಿರಣಗಳಾಗಿವೆ. 6ನೇ ತರಗತಿಯಿಂದ 12ನೇ ತರಗತಿಯ ವರೆಗೆ ಉಚ್ಛಗುಣಮಟ್ಟದ ಸಹಶಿಕ್ಷಣವನ್ನು ನೀಡುತ್ತಿವೆ. ಜವಾಹರ ನವೋದಯ ವಿದ್ಯಾಲಯಗಳು ವಿದ್ಯಾರ್ಥಿಗಳ ಶಿಕ್ಷಣ ಕ್ಷೇತ್ರದ ಉನ್ನತ ಸಾಧನೆಗೆ ಪ್ರೇರಕವಾದ ಘನೋದ್ದೇಶಗಳನ್ನು ಹೊಂದಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಅತ್ಯಾಧುನಿಕ ಶಿಕ್ಷಣ ನೀಡುವುದು ಮೂರು ಭಾμÉಯಲ್ಲಿ ಓದು ಬರಹ ಕಲಿಯಲು ಅವಕಾಶ ನೀಡುತ್ತಿವೆ.

ಧಾರವಾಡದಿಂದ 7 ಕಿ.ಮೀ. ದೂರದ ಕ್ಯಾರಕೊಪ್ಪ ಗ್ರಾಮದ ಬಳಿ,ಸುಸಜ್ಜಿತವಾದ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ, ಕಲಿಕೆಯ ಪೂರಕ ಸಾಧನಗಳು, ಕ್ರೀಡಾಂಗಣ ಹಾಗೂ ಸುಂದರವಾದ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜವಾಹರ ನವೋದಯ ವಿದ್ಯಾಲಯಕ್ಕೆ 2021-22 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ವಿದ್ಯಾಲಯವು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE)ಯ ಪಠ್ಯಕ್ರಮಕ್ಕೆ ಒಳಪಟ್ಟಿದ್ದು, ಊಟ, ವಸತಿ, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು. 6ನೇ ತರಗತಿಯ 80 ವಿದ್ಯಾರ್ಥಿಗಳ ಆಯ್ಕೆಯನ್ನು ಪರೀಕ್ಷೆಯ ಮೂಲಕ ನಡೆಸಲಾಗುವುದು. 2021ರ ಜ.ನ.ವಿ ಪ್ರವೇಶ ಪರೀಕ್ಷೆಗೆ ಸರಳವಾದ ಗಣಕೀಕೃತ ಅರ್ಜಿಯನ್ನು ಸಲ್ಲಿಸಬೇಕು. www.navodaya.gov.in ಮೂಲಕ ಯಾವುದೇ ಶುಲ್ಕವಿಲ್ಲದೆ ಅರ್ಜಿಯನ್ನು ಸಲ್ಲಿಸಬಹುದು. 5 ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು, ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದ ಪ್ರಮಾಣ ಪತ್ರವನ್ನು ಅಭ್ಯರ್ಥಿಯ ಹಾಗೂ ಪಾಲಕ/ಪೆÇೀಷಕರ ಸಹಿ ಮತ್ತು ಪೆÇೀಟೊದೊಂದಿಗೆ ಅಪೆÇ್ಲೀಡ್ ಮಾಡಬೇಕು. ಗಣಕೀಕೃತ ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ.
ಶೇ.25 ನಗರ ಮತ್ತು ಶೇ.75 ಗ್ರಾಮೀಣ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಪ.ಜಾ. ಹಾಗೂ ಪ.ಪಂ.ವಿದ್ಯಾರ್ಥಿ ಗಳಿಗೆ ಶೇ. 22.5, ಓಬಿಸಿ ವಿದ್ಯಾರ್ಥಿ ಗಳಿಗೆ ಶೇ.27, ವಿಭಿನ್ನ ಶಕ್ತ ವಿದ್ಯಾರ್ಥಿಗಳಿಗೆ ಶೇ.3 ಹಾಗೂ ಇತರೆ ವಿದ್ಯಾರ್ಥಿಗಳಿಗೆ ಉಳಿದ ಶೇ.47.5 ರಂತೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ.
ಪ್ರತಿ ತರಗತಿಯಲ್ಲಿ ಅಂತರ್ಜಾಲ ವ್ಯವಸ್ಥೆ. ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವ ವಿಶೇಷ ವಲಸೆ ನೀತಿ.ಸುಸಜ್ಜಿತ 40 ಲ್ಯಾಪ್‍ಟಾಪ್ ಮತ್ತು ಸ್ಮಾರ್ಟ್ ಬೋರ್ಡ್ ಉಳ್ಳ ಸ್ಯಾಮ್ಸಂಗ್ ಸ್ಮಾರ್ಟ್ ಕ್ಲಾಸ್ ಕೊಠಡಿ, ಪ್ರತ್ಯೇಕ ರಸಾಯನಶಾಸ್ತ್ರ ಜೀವಶಾಸ್ತ್ರ, ಭೌತಶಾಸ್ತ್ರ ಮತ್ತು ಕಿರಿಯ ವಿದ್ಯಾರ್ಥಿಗಳ ವಿಜ್ಞಾನ ಪ್ರಯೋಗಾಲಯಗಳು.ಗಣಿತ ವಿಷಯಕ್ಕೆ ಪರಿಸರದಲ್ಲಿ ಮಾಡಿರುವ ಗಣಿತ ಮಾದರಿಗಳ ತೋಟ ಮತ್ತು ಪ್ರಯೋಗಾಲಯ.ಹತ್ತು ಸಾವಿರಕ್ಕೂ ಮೇಲ್ಪಟ್ಟು ಪುಸ್ತಕ ಗಳಿರುವ ಸುಸಜ್ಜಿತ ಗ್ರಂಥಾಲಯ ಸೌಕರ್ಯಗಳಿವೆ.ಕಲೆ, ಸಂಗೀತ ಮತ್ತು ಇತರೆ ಸಾಂಸ್ಕøತಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ,ವಿಶಾಲವಾದ 400ಮೀ. ಕ್ರೀಡಾಂಗಣ ವಿದ್ದು, ಎಲ್ಲ ರೀತಿಯ ಆಟೋಟಗಳಿಗೆ ಪ್ರಾಶಸ್ತ್ಯ ಸಿಗುತ್ತಿದೆ.ಶಿಕ್ಷಕರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ಯಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿ ನಿಲಯಗಳಿವೆ.
ಈ ಶಾಲೆಯಿಂದ ವಿದ್ಯೆ ಪಡೆದ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗ ಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ ಉತ್ತಮ ಗುಣಮಟ್ಟದ ಶಿಕ್ಷಣದ ಸೌಕರ್ಯ ಪಡೆಯಬಹುದು ಎಂದು ಧಾರವಾಡ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಓ.ಎಂ.ಪಂಕಜಾಕ್ಷನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ವಿವರಗಳಿಗೆ ಮೊ.ಸಂಖ್ಯೆ 6364281231, ದೂ.ಸಂಖ್ಯೆ 0836-2778326 ಸಂಪರ್ಕಿಸಬಹುದು

Share and Enjoy !

Shares