ಡಾ|| ಬಿ.ಆರ್ ಅಂಬೇಡ್ಕರ್‌ರವರ ಮಹಾ ಪರಿನಿರ್ವಾಣ ದಿನ : ಡಾ|| ಬಿ.ಆರ್ ಅಂಬೇಡ್ಕರ್‌ ಯುವಕರ ಸಂಘದ ಮಹಾನಂದಿ ಕೊಟ್ಟಂ ವತಿಯಿಂದ ನಮನ

Share and Enjoy !

Shares
Listen to this article

 

ಬಳ್ಳಾರಿ: ಡಾ||ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್‌ರವರ 64ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಕಛೇರಿಯಲ್ಲಿ ಇಂದು ಅಂಬೇಡ್ಕರ್‌ರವರಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಒಂದು ನಿಮಿಷಗಳ ಮೌನ ಆಚರಿಸಿ ಇದೇ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರಿಗೆ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಬಾಬು , ಉಪಧ್ಯಾಕ್ಷರಾದ ಗೋಪಾಲ್, ಓಂಕಾರಿ, ಡಿ.ಶೇಕ್ಷವಲಿ ಪ್ರಧಾನ ಕಾರ್ಯದರ್ಶಿ ಕೆ.ಮಲ್ಲಿನಾಥ್, ಅವರು ಕ್ಯಾಂಡಲ್ ಬೆಳಗಿಸಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಸಹ ಕಾರ್ಯದರ್ಶಿ ಲಕ್ಷ್ಮಣ. ಎಸ್ ಭಂಡಾರಿ, ಸಂಘಟನೆ ಕಾರ್ಯದರ್ಶಿಗಳಾದ ಕೆ.ಇ.ಈರೇಶ್, ಗುರುಸ್ವಾಮಿ , ಕೆ.ವೈ.ಯುವರಾಜ್ , ಖಂಜಾಚಿ, ಮಂಜುನಾಥ್ ಹಾಗೂ ಸದಸ್ಯರಾದ ರಾಮಾಂಜೀ , ರಾಘವೇಂದ್ರ, ಶಶಿಕುಮಾರ್, ಪರಶುರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share and Enjoy !

Shares