ಗ್ರಾಮ ಪಂಚಾಯತಿ ಸದಸ್ಯರನ್ನು
ಹರಾಜು ಹಾಕಿದ ಗ್ರಾಮಸ್ಥರು
ವಿಜಯನಗರವಾಣಿ ಸುದ್ದಿ
ಬಳ್ಳಾರಿಜಿಲ್ಲೆ
ಬಳ್ಳಾರಿ :ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ
ಚುನಾವಣೆಯ ಸದಸ್ಯರನ್ನೇ ಹರಾಜು ಹಾಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ.
ಸದಸ್ಯರ ಹರಾಜು ಪ್ರಜ್ಞಾವಂತ ಸಮುದಾಯ ತಲೆತಗ್ಗಿಸುವಂತಾಗಿದೆ ಯಾರು ಹೆಚ್ಚಿಗೆ ಹಣ ಕೊಡುತ್ತಾರೋ ಅವರನ್ನು ಜಯಶಾಲಿ ಎಂದು ಘೋಷಣೆ ಮಾಡೋ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ.ಸಿಂದಿಗೇರಿ ಗ್ರಾಪಂ ಗೆ ಸೇರಿದ ಬೈಲೂರು ಗ್ರಾಮದ ಎಲ್ಲ ಸದಸ್ಯ ಸ್ಥಾನಗಳು ಹರಾಜ್ ಆಗಿವೆ.
ಒಟ್ಟು 26 ಸದಸ್ಯ ಸ್ಥಾನ ಹೊಂದಿರೋ ಸಿಂದಿಗೇರಿ ಗ್ರಾಪಂಚಾಯತಿಯಲ್ಲಿ 2 ರಿಂದ 5.7 ಲಕ್ಷದ ವರೆಗೂ ಹಣ ಪಾವತಿಸಿ ಸದಸ್ಯತ್ವ ಪಡೆದಿದ್ದಾರೆ. ಗ್ರಾಮದ ಮಾರೆಮ್ಮನ ಗುಡಿ ಮುಂದೆ ರಾತ್ರೋ ರಾತ್ರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯಾರು ಹೆಚ್ಚಿಗೆ ಹಣ ಕೊಡುತ್ತಾರೆ ಅವರನ್ನು ಗ್ರಾಪಂ ಸದಸ್ಯರನ್ನಾಗಿ ಆಯ್ಕೆ ಮಾಡೋ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಕೊಲೆ ಮಾಡಲಾಗಿದೆ.
ಈಗ ಸದಸ್ಯರನ್ನ ಹರಾಜು ಹಾಕುವ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ,ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಜಿಪಂ ಸಿಇಒ ನಂದೀನಿ ಅವರು, ಸ್ಥಳೀಯ ತಹಸೀಲ್ದಾರ ಅವರಿಗೆ ಆದೇಶ ಮಾಡಿದ್ದು, ಕೂಡಲೇ ಹರಾಜಿನಲ್ಲಿ ಭಾಗಿಯಾದ ಎಲ್ಲ ಆಕಾಂಕ್ಷಿಗಳ ಮೇಲೆ ಪ್ರಕರಣ ದಾಖಲಿಸಲು ಕಟ್ಡುನಿಟ್ಡಿನ ಸೂಚನೆ ನೀಡಿದ್ದಾರೆ.ಈ ಹಿನ್ನಲೆಯಲ್ಲಿ ತಹಸೀಲ್ದಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…
ಆದರೆ, ಗ್ರಾಮಸ್ಥರ ವಾದವೆ ಬೇರೆ, ಚುನಾವಣೆ ನಡೆಸುವ ಬದಲು, ಸೂಕ್ತ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ, ಬಂದ ಹಣದಿಂದ ದೇವಸ್ಥಾನ ಜೀರ್ಣೋದ್ದಾರ ಮಾಡೋದಾಗಿ ತಿಳಿಸಿದ್ದಾರೆ.ಆದರೆ, ಅದೇನೆ ಇರಲಿ ದುಡ್ಡಿದ್ದವರಿಗೆ ಅಧಿಕಾರ ಎಂಬುದು ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಸಾಬೀತಾಗಿದೆ