ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಾನ್ವಿ: ಪುರಸಭೆಯ ಪೌರ ನೌಕರ ಮತ್ತು ಪೌರ ಕಾರ್ಮಿಕರಿಗೆ ಪುರಸಭೆ ಹಾಗೂ ಯೋಗ ಸನ್ನಿಧಿ ಜ್ಞಾನವಿದ್ಯಾ ಪೀಠ ಟ್ರಸ್ಟ್ ಸಹಯೋಗದಲ್ಲಿ ಇಂದಿನಿಂದ 5ದಿನಗಳ ಕಾಲ ಉಚಿತ ಯೋಗ ಶಿಬಿರವನ್ನು ಪುರಸಭೆ ಕಛೇರಿ ಆವರಣದಲ್ಲಿ ನಡೆಸಲಾಯಿತು.
ನಂತರ ಪುರಸಭೆಯ ಮುಖ್ಯಾಧಿಕಾರಿ ಜಗದೀಶ ಭಂಡಾರಿ ಮಾತನಾಡಿ, ಪ್ರತಿಯೊಬ್ಬರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢತೆ ಮುಖ್ಯವಾಗಿದ್ದು, ನಿರಂತರ ಯೋಗಾಭ್ಯಾಸದಿಂದ ಮಾತ್ರ ಇದು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಪುರಸಭೆಯ ಪೌರ ನೌಕರರು ಮತ್ತು ಪೌರ ಕಾರ್ಮಿಕರ ಆರೋಗ್ಯದ ಕಾಪಾಡುವ ಉದ್ದೇಶದಿಂದ ಪುರಸಭೆ ಹಾಗೂ ಯೋಗ ಸನ್ನಿಧಿ ಜ್ಞಾನವಿದ್ಯಾ ಪೀಠ ಟ್ರಸ್ಟ್ ಸಹಯೋಗದಲ್ಲಿ ಇಂದಿನಿಂದ ಡಿ.7ರಿಂದ ಡಿ.11ರ ಐದು ದಿನಗಳ ವರೆಗೆ ಉಚಿತ ಯೋಗಾಭ್ಯಾಸದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಯೋಗಾ ಗುರು ಅನ್ನದಾನಯ್ಯನವರ ಕಾರ್ಯ ಶ್ಲಾಘನೀಯ ಎಂದರು.
ನಂತರ ಯೋಗ ಸನ್ನಿಧಿ ಜ್ಞಾನವಿದ್ಯಾ ಪೀಠ ಟ್ರಸ್ಟ್ ಯೋಗಾ ಗುರು ಅನ್ನದಾನಯ್ಯ ಮಾತನಾಡಿ, ಯೋಗ ಅಭ್ಯಾಸ ಮಾಡುವದರಿಂದ ಮನಸ್ಸುಹಾಗೂ ದೇಹ ಉಲ್ಲಾಸವಾಗಿರುತ್ತೆ ಜೊತೆಗೆ ದೈಹಿಕ, ಮಾನಸಿಕ, ಬೌದ್ಧಿಕವಾಗಿ ಸದೃಢತೆ ಹೊಂದಬಹುದಾಗಿದೆ. ಕೊರೊನಾದಂತಹ ರೋಗದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಯೋಗಾಭ್ಯಾಸದಿಂದ ಸಾಧ್ಯವಿದೆ ಎಂದರು.
ಇಂದು ಬೆಳಿಗ್ಗೆ ಪುರಸಭೆ ಕಾರ್ಯಾಲಯದಲ್ಲಿ ನಡೆದ ಯೋಗಾಭ್ಯಾಸ ಶಿಬಿರದಲ್ಲಿ ಪುರಸಭೆಯ ಎಲ್ಲಾ ಪೌರ ನೌಕರರು ಮತ್ತು ಪೌರಕಾರ್ಮಿರು ಭಾಗವಹಿಸಿದ್ದರು.