ಬಳ್ಳಾರಿ ಜಿಲ್ಲೆ
ಸಂಡೂರು: ಔಷಧಿ ತರವ ನೆಪದಲ್ಲಿ ಅಂಗಡಿಗೆ ಬಂದಿದ್ದ ಬಾಲಕಿಯೊಬ್ಬಳು ೨೦ ಸಾವಿರ ರೂಪಾಯಿ ಕಳ್ಳತನ ಮಾಡಿದ ಘಟನೆ, ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದ ಅಪೋಲೋ ಫಾರ್ಮಸಿಯಲ್ಲಿ ನಡೆದಿದೆ. ತಾಯಿ ಜೊತೆಗೆ ಹೊಂಚು ಹಾಕಿ ಬಂದಿದ್ದ ಬಾಲಕಿ. ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಜೇಬಿಗೆ ಕೈ ಹಾಕಿ ಹಣ ಕದ್ದಿದ್ದಾಳೆ ವ್ಯಕ್ತಿಯ ಬಳಿಯಲ್ಲಿ ಹಣ ಇರುವುದನ್ನು ಗಮನಿಸಿದ ತಾಯಿ ಮಗಳು ಔಷಧೀಯ ಅಂಗಡಿಗೆ ಹೋದ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಇತ್ತಾ ತಾಯಿ ಬೇರೆ ಕಡೆ ಎಲ್ಲರ ಗಮನ ಸೆಳಿದಿದ್ದಾಳೆ ಆಗ ಚಾಲಕಿ ಮಗಳು ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಜೇಬಿಗೆ ಕೈ ಹಾಕಿ ಹಣ ಕದ್ದು ಪರಾರಿಯಾಗಿದ್ದಾಳೆ.
ಚಾಲಾಕಿ ಕೈಚಳಕ ಅಂಗಡಿಯಲ್ಲಿ ಹಾಕಲಾಗಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.