ರೈತರು ಕರೆ ನೀಡಿರುವ ಭಾರತ ಬಂದ್ ಗೆ ಸಿಪಿಐಎಂ ಸಂಪೂರ್ಣ ಬೆಂಬಲ- ಶಬ್ಬೀರ್

Share and Enjoy !

Shares

 

ವಿಜಯನಗರವಾಣಿ
ರಾಯಚೂರು ಜಿಲ್ಲೆ

ದೇವದುರ್ಗ: 3ಕೃಷಿ ಕಪ್ಪು ಕಾಯಿದೆಗಳನ್ನು ವಾಪಸ್ ಪಡೆಯಬೇಕೆಂದು ಕಳೆದ ಹತ್ತು ದಿನಗಳಿಂದ ದೆಹಲಿಯಲ್ಲಿ ಚಳವಳಿಯನ್ನು ಆರಂಭಿಸಿರುವ ರೈತರು ಡಿಸೆಂಬರ್ 8ರಂದು ಭಾರತ್ ಬಂದ್ ಗೆ ಕರೆ ನೀಡಿದ್ದಾರೆ. ದೆಹಲಿಯ ಪ್ರತಿ ರಸ್ತೆಗಳನ್ನು ಪ್ರತಿ ಟೋಲ್ ಗಳನ್ನು ಬಂದ್ ಮಾಡುತ್ತೇವೆ ಎಂದು ಗುಡುಗಿದ್ದಾರೆ ಸದರಿ ಭಾರತ ಬಂದ್ ಗೆ ಸಿಪಿಐ(ಎಂ)ಹಾಗೂ ವರ್ಗ ಸಮೂಹ ಸಂಘಟನೆಗಳಾದ ರೈತ ಕಾರ್ಮಿಕ ಮಹಿಳಾ ವಿದ್ಯಾರ್ಥಿ ಯುವಜನ ಸಂಘಟನೆಗಳು ಬೆಂಬಲಿಸಿ ಭಾರತ ಬಂದ್ ನಲ್ಲಿ ಪಾಲ್ಗೊಳ್ಳಲು ದೇವದುರ್ಗ ತಾಲ್ಲೂಕು ಸಮಿತಿ ಕರೆ ನೀಡುತ್ತದೆ.
ವಿವಾದಾತ್ಮಕ ಕಾರ್ಪೊರೇಟ್ ಪರ ಕೃಷಿ ಮಸೂದೆಗಳಾದ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ)ಕಾಯ್ದೆ-2020,ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕಾಯ್ದೆ-2020ರ ಒಪ್ಪಂದ,ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ-2020 ಮತ್ತು ವಿದ್ಯುತ್ ತಿದ್ದುಪಡಿ ಕಾಯ್ದೆ-2020 ವಾಪಸ್ ಪಡೆಯಬೇಕೆಂದು ದೆಹಲಿಯಲ್ಲಿ ಕಳೆದ ಹತ್ತು ದಿನಗಳಿಂದ ಹೋರಾಡುತ್ತಿರುವ ರೈತರು ಇನ್ನು ಮುಂದೆ ಕೇಂದ್ರ ಸರಕಾರದೊಂದಿಗೆ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ತೀರ್ಮಾನಿಸಿ ಹೋರಾಟವನ್ನು ತೀವ್ರಗೊಳಿಸಲು ಡಿಸೆಂಬರ್ 8-2020 ರಂದು ಮಂಗಳವಾರ ಭಾರತ ಬಂದ್ ಗೆ ಕರೆ ನೀಡಿದ್ದಾರೆ ಸರಕಾರದ ಜೊತೆ ಮಾತುಕತೆಯಿಂದ ಪ್ರಯೋಜನವಿಲ್ಲ. ಅವರು ಕಾಯಿದೆಗಳನ್ನು ವಾಪಸ್ ಪಡೆಯಲು ಮುಂದಾಗುತ್ತಿಲ್ಲ ಹಾಗಾಗಿ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗಿದೆ. ಮಂಗಳವಾರದಂದು ಇಡೀ ದೇಶದಾದ್ಯಂತ ಬಂದ್ ಆಚರಿಸಲು ಮೂವತ್ತೈದಕ್ಕೂ ಹೆಚ್ಚು ರೈತ ಸಂಘಗಳ ಜಂಟಿ ಸಮಿತಿ ತೀರ್ಮಾನ ದ ಭಾಗವಾಗಿ ನಾವು ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ.
ಕೃಷಿಗೆ ಸಂಬಂಧಿಸಿದ 3 ಕಪ್ಪು ಕಾನೂನುಗಳು ರದ್ದಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲವೆಂದು ರೈತರು ಗುಡುಗಿದ್ದಾರೆ. ಬಂಧನ, ಲಾಠಿಯೇಟು, ಜಲಫಿರಂಗಿ, ಅಶ್ರುವಾಯುಗಳನ್ನು ಸಿಡಿಸಿ ರೈತರನ್ನು ಬಗ್ಗು ಬಡಿಯಲು ಯತ್ನಿಸಿದ ಸರಕಾರ ಕಳೆದ 3ದಿನಗಳಿಂದ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿತ್ತು. ಆದರೆ ರೈತರು ಕೇಂದ್ರದ ವಾದಗಳನ್ನು ಒಪ್ಪದೆ 3 ಕಾಯಿದೆಗಳನ್ನು ವಾಪಸ್ ಪಡೆಯಬೇಕೆಂದು ಪಟ್ಟು ಹಿಡಿದು ಹೋರಾಟ ಮುಂದುವರೆಸಿದಾಗ ಅವರ ಮೇಲೆ ಸಾಂಕ್ರಾಮಿಕ ಕಾಯ್ದೆ ಉಲ್ಲಂಘನೆ ಆರೋಪಗಳನ್ನು ಹೊರಿಸಿದೆ. ದೆಹಲಿ ಪೊಲೀಸರು ಈ ಕುರಿತು ರೈತ ಹೋರಾಟಗಾರರಿಗೆ ನೋಟಿಸ್ ನೀಡಿದ್ದಾರೆ ಎಂಎಸ್ಪಿ ಕೊಡುತ್ತೇವೆ ಎಂಬ ಸರಕಾರದ ಮಾತನ್ನು ನಾವು ನಂಬುವುದಿಲ್ಲ . ಸ್ವಾಮಿನಾಥನ್ ಆಯೋಗದ ವರದಿಯಂತೆ ರೈತರು ಬೆಳೆದ ಬೆಳೆಗೆ ಖರ್ಚು ಸೇರಿ ಒಂದೂವರೆ ಪಟ್ಟು ಬೆಲೆ ನಿಗದಿ ಮಾಡಬೇಕು ಇದಕ್ಕಾಗಿ ಕಾನೂನನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ. ಅದೇ ಸಮಯದಲ್ಲಿ ಬೆಲೆ ನೀತಿ ಆಯೋಗವು ಕಾರ್ಪೊರೇಟ್ ಗಳ ಪರವಾಗಿ ಬ್ಯಾಟಿಂಗ್ ಮಾಡುತ್ತಾ ಕೃಷಿ ಕಾಯ್ದೆಗಳನ್ನು ಸಮರ್ಥಿಸುವದನ್ನು ನೋಡಿದರೆ ರೈತ ವಿರೋಧಿ ನಡೆಯನ್ನು ಕೇಂದ್ರ ಸರಕಾರ ಅನುಸರಿಸಿದೆ. ಈ ರೈತ ವಿರೋಧಿ ನಡೆಯನ್ನು ನಮ್ಮ ಪಕ್ಷವು ತೀವ್ರವಾಗಿ ಖಂಡಿಸುತ್ತದೆ.
ಕಾರಣ ರೈತ ಕಾರ್ಮಿಕ ವಿರೋಧಿ ಪ್ಯಾಸಿಸ್ಟ್ ಮೋದಿ ಶಾ ಕೇಂದ್ರ ಸರಕಾರದ ವಿರುದ್ಧ ದೇಶದ ರೈತರು 3ಕಪ್ಪು ಕಾನೂನುಗಳನ್ನು ಹಿಂಪಡೆಯಲು ಒತ್ತಾಯಿಸಿ ಡಿಸೆಂಬರ್ 8ರಂದು ಭಾರತ ಬಂದ್ ಚಳುವಳಿಯಲ್ಲಿ ತಾಲ್ಲೂಕಿನ ರೈತ ಕಾರ್ಮಿಕರು ವಿದ್ಯಾರ್ಥಿ ಯುವಜನರು ಮಹಿಳೆಯರು ಹಾಗೂ ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರೈತರ ಬಂದ್ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು
ಶಬ್ಬೀರ್ ಹಮ್ಮದ್ ಹವಾಲ್ದಾರ್
ಸಿಪಿಐಎಂ ತಾಲೂಕ ಕಾರ್ಯದರ್ಶಿ ದೇವದುರ್ಗ

Share and Enjoy !

Shares