ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿ: ರೈತ ಸಂಘಟನೆ ಕರೆ ನೀಡಿರುವ ಭಾರತ್ ಬಂದ್ ಗೆ ಮಸ್ಕಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ನೇತೃತ್ವದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡುವ ಮೂಲಕ ಬೆಂಬಲ ನೀಡಿದರು. ಮಸ್ಕಿ ಪಟ್ಟಣದ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ಮಾಡಿದರು. ಈ ವೇಳೆ. ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಸಿದ್ದನಗೌಡ ತುರ್ವಿಹಾಳ, ಶ್ರೀ ಶೈಲಪ್ಪ ಬ್ಯಾಳಿ,
ಎಚ್. ಬಿ.ಮುರಾರಿ,ಮೌನೇಶ್ ಗೌಡ ಗೆದ್ದಗೌಡರ ಬಳಗನೊರು, ಸುರೇಶ್ ಬ್ಯಾಳಿ,ಮಲ್ಲಯ್ಯ ಮುರಾರಿ,ಹಾಗೂ
ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.