Share and Enjoy !

Shares
Listen to this article

ಸರೋಜಿನಿ ಪಾಟೀಲರ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು: ದುರ್ಗಾಸಿಂಗ್

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಲಿಂಗಸೂಗೂರು :ಸರೋಜಿನಿ ಪಾಟೀಲರು ಸಮಾಜದ ಸರ್ವಾಂಗೀಣ ಏಳಿಗೆಗೆ ಅವಿಶ್ರಾಂತವಾಗಿ ಶ್ರಮಿಸುತ್ತಿರುವ ಸಾಮಾಜಿಕ ಹೊಣೆಗಾರಿಕೆ ಮೆಚ್ಚುವಂಥದ್ದು ಎಂದು ಸಾಹಿತಿ ದುರ್ಗಾಸಿಂಗ್ ಅಭಿಪ್ರಾಯಪಟ್ಟರು.
ಖಾಸಗಿ ಪದವಿ ಪೂರ್ವ ಕಾಲೇಜುಗಳ ಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ವಿನಾಯಕ ಮಹಿಳಾ ಮಂಡಳಿ ಹಾಗೂ ವಿವಿಧ ಮಹಿಳಾ ಒಕ್ಕೂಟಗಳು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ದಶಕಗಳಿಂದ ವಿವಿಧ ಮಹಿಳಾ ಒಕ್ಕೂಟಗಳನ್ನು ಕಟ್ಟಿಕೊಂಡು ಮಹಿಳೆಯರ ಆರ್ಥಿಕ ಸಬಲತೆ ಆದ್ಯತೆ ನೀಡಿ, ಮುಖ್ಯವಾಹಿನಿಗೆ ತರಲು ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡುತ್ತಿರುವ ಸರೋಜಿನಿ ಪಾಟೀಲರ ಕಾರ್ಯ ಸ್ತುತ್ಯರ್ಹ ಎಂದರು.
ಉಮಾ ಬಸನಗೌಡ, ಶರಣಮ್ಮ ಪಾಟೀಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಶ್ಯಾವಮ್ಮ, ಶಿವರುದ್ರಗೌಡ ಪಾಟೀಲ್, ಗಿರಿಜಮ್ಮ, ಉಮಾ ಕುಲಕರ್ಣಿ, ವಿಜಯಲಕ್ಷ್ಮೀ ನಂದಿಕೋಲಮಠ, ಶಕುಂತಲಾ ಕುರಿ, ವಿಶಾಲಾಕ್ಷಿ, ಅನಿತಾ, ವೀರಮ್ಮ ಪ್ರಿಯಾ ಪಾಟೀಲ್, ಅನುರಾಧಾ, ಭಾರತಿ, ಕಮಲಾ ಕುಂಬಾರ್, ಸುನೀತಾ ಪಾಟೀಲ್, ವೀರಮ್ಮ, ಪದ್ಮಾ ಬ್ಯಾಂಕ್, ವೀಣಾ, ಪೂಜಾ,ಪದ್ಮಾ, ಸರಸ್ವತಿ ಕಂದಕೂರ ಸೇರಿದಂತೆ ಹಲವರು ಭಾಗವಹಿಸಿ ಅಭಿನಂದಿಸಿದರು.

Share and Enjoy !

Shares