ಬಸಾಪುರ ಗ್ರಾಮವನ್ನು ಕುರುಗೋಡು ಪುರಸಭೆಗೆ ಸೇರ್ಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ.

Share and Enjoy !

Shares
Listen to this article

 

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಕುರುಗೋಡು: ಸಮೀಪದ ಬಸಾಪುರ ಗ್ರಾಮವನ್ನು ಕುರುಗೋಡು ಪುರಸಭೆಗೆ ಸೇರ್ಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿ ಗ್ರಾಪಂ ಚುನಾವಣೆಯನ್ನು
ಬಹಿಸ್ಕರಿಸುವದಾಗಿ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಚುನಾವಣೆ ಅಧಿಕಾರಿ ಕೆ. ರಾಘವೇಂದ್ರ ರಾವ್ ಹಾಗೂ ತಾಪಂ ಇಓ ಮಡಗಿನ ಬಸಪ್ಪ ಭೇಟಿ ನೀಡಿ ಗ್ರಾಮಸ್ಥರನ್ನು ಮನವೊಲಿಸಿ ನಿಮ್ಮ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸುವುದಾಗಿ ಹೇಳಿ ಮತದಾನ ಮಾಡುವುದು ನಿಮ್ಮ ಹಕ್ಕು ಎಂದು ಪ್ರತಿಭಟನೆಯನ್ನು ಹಿಂಪಡೆಯುವಂತೆ ತಿಳಿಸಿದರು. ಆದರೂ ಪಟ್ಟು ಬಿಡದ ಗ್ರಾಮಸ್ಥರು ಕುರುಗೋಡು ಪುರಸಭೆ ನಮಗೆ ಅತ್ತಿರವಾಗುತ್ತೆ ಇಲ್ಲಿನ ಗ್ರಾಮಸ್ಥರು ತುಂಬ ಕುರುಗೋಡಿಗೆ ಒಡನಾಟ ಹೆಚ್ಚು ಪ್ರತಿಯೊಂದು ಕೆಲಸಕ್ಕೆ ಕುರುಗೋಡಿಗೆ ಹೋಗಬೇಕು. ಗೇಣಿಕೆಹಾಳ್ ಗೆ ಅನುಕೂಲತೆ ಇಲ್ಲ ಆದ್ದರಿಂದ ನಮ್ಮ ಗ್ರಾಮವನ್ನು ಪುರಸಭೆಗೆ ಸೇರ್ಪಡಿಸುವಂತೆ ಆಗ್ರಹಿಸಿದರು. ಅಧಿಕಾರಿಗಳು ಕೊನೆಯದಾಗಿ ಗ್ರಾಮಸ್ಥರನ್ನು ಮನವೊಲಿಸಿ ನಿಮ್ಮ ಬೇಡಿಕೆ ಹಿಡೇರಿಸಲು ಸರಕಾರಕ್ಕೆ ಪತ್ರ ಬರೆದು ಅನುಕೂಲತೆ ಮಾಡಿಕೊಡಲಾಗುವುದು ಎಂದು ತಿಳಿ ಹೇಳಿ ಮತ ದಾನ ಮಾಡುವಂತೆ ತಿಳಿಸಿ ಪ್ರತಿಭಟನೆಯನ್ನು ಹಿಂಪಡಿಯಿರಿ ಎಂದರು. ಗ್ರಾಮಸ್ಥರು ಪಟ್ಟು ಬಿಡದೆ ಮತದಾನ ಮಾಡುವುದಿಲ್ಲ ಬಹಿಸ್ಕರಿಸಲಾಗುದು ತಿಳಿಸಿದರು.

Share and Enjoy !

Shares