ವಿಜಯನಗರವಾಣಿ ಸುದ್ದಿ
ರಾಯಚೂರುಜಿಲ್ಲೆ
ಮಸ್ಕಿ :ತಾಲ್ಲೂಕಿನ ವಟಗಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಬಸಾಪುರ ಗ್ರಾಮಸ್ಥರ ತಮಗೆ ಆದ ಅನ್ಯಾಯಕ್ಕೆ ಹೊಣೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಅಮರೇಶ್ ರಾಥೋಡ್ ಮತ್ತು ತಾಲ್ಲೂಕ ಅಧಿಕಾರಿ ಬಾಬು ರಾಠೋಡ ಅವರುಗಳನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಆಗ್ರಹಿಸಿ ತಾಲ್ಲೂಕ ಪಂಚಾಯ್ತಿ ಸಭಾಂಗಣದ ಮುಂದೆ ಧರಣಿ ಮಾಡಿದರು.
ವಟಗಲ್ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಬಸ್ಸಪೂರ ಗ್ರಾಮದಲ್ಲಿ ಕಳೆದ ಆರು ತಿಂಗಳಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡದೆ ಅನ್ಯಾಯ ಮಾಡಿದ್ದಾರೆ ಅದುವೇ ಒಂದೇ ಒಂದು ಜ್ಯಾತಿಗೇ ( ಒಂದು ಪ್ಯಾನಲ್) ಮಾತ್ರ ಕೆಲಸ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಆಗ್ರಹಿಸಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಛಲವಾದಿ ಮಹಾಸಭಾದ ತಾಲ್ಲೂಕ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿ “ಮಲ್ಲಪ್ಪ ಎಸ್ ಗೋನಾಳ ”
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗ್ರಾಮದಲ್ಲಿ ಸುಮಾರು ೩೦೦ಜನಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡಿದ್ದಾರೆ ಆದರೆ ಛಲವಾದಿ ಜನಾಂಗದ ಕೇವಲ ೨೦ ಜನಗಳಿಗೆ ಮಾತ್ರ ಉದ್ಯೋಗ ನೀಡದೆ ,ನಿರುದ್ಯೋಗ ಭತ್ಯೆ ನೀಡದೆ ಅನ್ಯಾಯ ಮಾಡಿದ್ದಾರೆ ಇಂತವರನ್ನು ಕೂಡಲೇ ಅಮಾನತ್ತು ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪಿಡಿಒ ನೊಂ ದಿಗೆ ಇ ಒ ಕೂಡ ಭಾಗಿಯಾಗಿದ್ದು ನಾನು ಸುಮಾರು ಐದು ಬಾರಿ ಬೇಟಿಯಾಗಿ ಚರ್ಚೆ ಮಾಡಿದರು ಯಾವುದೇ ಕೆಲಸ ಆಗಿಲ್ಲ, ತದನಂತರ ಇ ಒ ಫೋನ್ ಕರೆ ಯನ್ನು ಸ್ವೀಕರಿಸದೆ ಅಸಡ್ಡೆ ತೋರುತ್ತಿದ್ದಾರೆ ಕೂಡಲೇ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಇ ಒ ಮತ್ತು ಪಿಡಿ ಒ ಗಳನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಛಲವಾದಿ ಮುಖಂಡ ಹುಚ್ಚರೆಡ್ಡಿ ಹಿರೇ ದಿನ್ನಿ
ಮಾತನಾಡಿ ನಮ್ಮವರಿಗೆ ಆದ ಅನ್ಯಾಯ ಖಂಡಿಸುತ್ತಾ ಹಿರಿಯ ಅಧಿಕಾರಿಗಳು ಆದೇಶ ಮಾಡಿದರು ಪಿಡಿಒ ಮತ್ತು ಇ ಒ ಗಳು ನಿರುದ್ಯೋಗ ಭತ್ಯೆ ನೀಡದೆ ಇತ್ತ ಕೆಲಸವೂ ನೀಡದೆ ಕೇವಲ ನಮ್ಮ ಛಲವಾದಿ ಜನಾಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ತಾಲ್ಲೂಕ ಅಧ್ಯಕ್ಷ ಮಲ್ಲಪ್ಪ ಎಸ್ ಗೋನಾಳ, ಹುಚ್ಚ ರೆಡ್ಡಿ ಹಿರೇ ದಿನ್ನಿ ,ಶಂಕರ್ ಗೋನಾಳ, ವೆಂಕಟೇಶ,ಹಾಗೂ ಬಸಾಪುರ ಗ್ರಾಮದ ಹಿರಿಯರು ಮಹಿಳೆಯರು ಧರಣಿ ಸ್ಥಳದಲ್ಲಿ ಭಾಗವಹಿಸಿದ್ದರು