ಸರಕಾರಿ ಪದವಿ ಕಾಲೇಜಿನಲ್ಲಿ ಚುನಾವಣಾ ತರಬೇತಿ

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಮಸ್ಕಿ:ರಾಜ್ಯದಾದ್ಯಂತ ಗ್ರಾಮ ಪಂಚಾಯ್ತಿ ಚುನಾವಣೆಗಳು ಎರಡು ಹಂತದಲ್ಲಿ ಘೋಷಣೆಯಾಗಿದ್ದು
ಚುನಾವಣಾ ತರಬೇತಿ ಪ್ರಕ್ರಿಯೆ ನಡೆದಿದೆ.
ಅದರಂತೆ ರಾಯಚೂರು ಜಿಲ್ಲೆಯ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಸ್ಕಿಯ ತಹಸಿಲ್ದಾರ್ ಬಲರಾಮಕಟ್ಟಿಮನಿಯವರ ಅಧ್ಯಕ್ಷತೆಯಲ್ಲಿ (R,O)ಚುನಾವಣಾಧಿಕಾರಿಗಳು ಮತ್ತು (A,R,O)ಸಹಾಯಕ ಚುನಾವಣಾಧಿಕಾರಿಗಳಿಗೆ ಎರಡನೆಯ ಬಾರಿಗೆ ತರಬೇತಿ ನೀಡಲು ಸಭೆಯನ್ನು ಕರೆಯಲಾಗಿದೆ.
ಅಧ್ಯಕ್ಷತೆಯನ್ನು ತಹಸಿಲ್ದಾರ್ ಬಲರಾಮಕಟ್ಟಿಮನಿಯವರು ವಹಿಸಿದ್ದರು.
ಹಾಗೂ ಸಂಪನ್ಮೂಲವ್ಯಕ್ತಿಗಳಾದ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆಕಾಲೇಜಿನ ಪ್ರಾಂಶುಪಾಲರೂ ಆಗಿರುವ ಪಂಪನಗೌಡ ಪಾಟೀಲ್ ಮತ್ತುಉಪನ್ಯಾಸಕರಾದ ಮಹಾಂತೇಶ ಮಸ್ಕಿಯವರು ಒಡಗೂಡಿ ತರಬೇತಿಯನ್ನು ನೀಡಿದರು.

ಮಸ್ಕಿ ತಾಲೂಕಿನ ವ್ಯಾಪ್ತಿಗೆ
21 ಗ್ರಾಮಪಂಚಾಯ್ತಿಗಳು ಬರುತ್ತವೆ. 140ಮತಗಟ್ಟೆಗಳು, ಕೋವಿಡ್ ನಿಮಿತ್ಯ, 54ಹೆಚ್ಚುವರಿ ಮತಗಟ್ಟೆಗಳನ್ನು ಮಾಡಲಾಗಿದೆ.
ಹೀಗಾಗಿ ಒಟ್ಟು 194 ಮತಗಟ್ಟೆಗಳಾಗಿವೆ.

ಮಸ್ಕಿತಾಲೂಕು ಎರಡನೆ ಹಂತದ ಚುನಾವಣೆಯಲ್ಲಿರುವದರಿಂದ ನಾಮಪತ್ರ ಸ್ವೀಕಾರ ನಾಳೆಯಿಂದ ಆರಂಭವಾಗಲಿದೆ.

ಹೀಗಾಗಿ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ತಮ್ಮ ಚುನಾವಣಾ ಪರಿಕರಗಳನ್ನು ಪಡೆದು.

ನಾಳೆ ಅವರವರಿಗೆ ಹಂಚಲಾದ ಪಂಚಾಯ್ತಿಗಳಿಗೆ ಹೋಗಿ ನಾಮಪತ್ರಸ್ವೀಕಾರ ಕಾರ್ಯ ನಿರ್ವಹಿಸಲಿದ್ದಾರೆ.

27 ನೇ ತಾರೀಕಿಗೆ ಮತದಾನ ನಡೆಯಲಿದೆ ಎಂದು ತಹಸಿಲ್ದಾರರು ಮಾಹಿತಿ ನೀಡಿದರು.

Share and Enjoy !

Shares