ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿ : ತಾಲ್ಲೂಕಿನ ಪಮನಕಲ್ಲುರೂ ಗ್ರಾಮದ ಹೊರವಲಯದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ 5ಎ ಕಾಲುವೆ ಹೋರಾಟ ಸಮಿತಿಯಿಂದ ಅನಿರ್ದಿಷ್ಟ ಅವಧಿ ಧರಣಿ ಮುಂದುವರೆದಿದ್ದು 21 ದಿನಗಳನ್ನು ಪೂರೈಸಿದ್ದು ಇಂದು ಧರಣಿ ಸಳ್ಥಕೆ ಅಧಿಕಾರಿಗಳಾದ AC.DYSP. ಮತ್ತು CPI. ಎಲ್ಲಾರು ಸೇರಿ ಚುನಾವಣಾ ಬಹಿಷ್ಕಾರ ಮಾಡದಂತೆ ರೈತರ ಮನವೊಲಿಸಲು ಮುಂದಾ ದಾರೂ ಫಲ ನೀಡಲಿಲ್ಲ. ಕಾರಣ ರೈತರ ಅಚಲ ನಿರ್ಧಾರ 5 A ನೀರಿಗಾಗಿ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರಿಸುವದಾಗಿ ತಿಳಿಸಿ ಗ್ರಾಮವಾರ ರೈತರು ಒಕ್ಕೊರಲಿನಿಂದ ಚುನಾವಣಾ ಬಹಿಷ್ಕಾರದ ಪತ್ರವನ್ನು ತಾಲ್ಲೂಕು ಧಂಡಾಧಿಕಾರಿಗಳಿಗೆ ನೀಡಿ ಧರಣಿ ಸಳ್ಥದಲ್ಲಿಯೆ ಸಿಕೃತಿ ಪತ್ರವನ್ನು ಪಡೆದರು.
ಇದರಿಂದ ರೈತರ ಹೋರಾಟ ಕಿಚ್ಚು ಎದ್ದು ಕಾಣುತ್ತದೆ ಯಾವುದೇ ಅಧಿಕಾರಿಗಳು ಬಂದು ಮನವೊಲಿಸಲು ಮುಂದಾದರು ರೈತರು ಜಗ್ಗದೆ, ಕುಗ್ಗದೆ, ನಮ್ಮ ಹೋರಾಟ ಏನೇ ಇದ್ದರು 5 A ಯೋಜನೆ ಜಾರಿ ಮತ್ತು ನಮ್ಮ ನೀರು ಪಡೆದೇ ತಿರುತ್ತೆವೆ ಎಂದು ಘಂಟಾಘೋಷವಾಗಿ ತಿಳಿಸಿದರು.
21 ನೆಯ ದಿನದಂದು ,ಮಸ್ಕಿ ಶ್ರೀ ಗಚ್ಚಿನ ಮಠದ ಶ್ರೀಗಳು , ಯತಗಲ್ ಗ್ರಾಮದ ರೈತರ ಸರದಿ ಇದ್ದು ಇವರೊಂದಿಗೆ ಪಾಮನಕಲ್ಲೂರ, ಅಮೀನಗಡವಟಗಲ್ ,ಆನಂದಗಲ್,ಚಿಲ್ಕರಾಗಿ, ಇನ್ನಿತರ ಗ್ರಾಮದ ರೈತರು ಹಾಗೂ ಹೋರಾಟ ಸಮಿತಿಯ ಸರ್ವ ಸದಸ್ಯರು ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.