ಅಪ್ರಾಪ್ತ ಬಾಲಕಿ ಜೊತೆಗೆ ಅಂಕಲ್ ಲವ್ : ವಿಷಸೇವಿಸಿ ಆತ್ಮಹತ್ಯೆಗೆಯತ್ನ !

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು :ವಿವಾಹಿತನೊಂದಿಗೆ ಅಪ್ರಾಪ್ತ ಬಾಲಕಿಯೊಬ್ಬಳು ಪ್ರೇಮಿಸಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ
ಲಿಂಗಸಗೂರು ತಾಲೂಕಿನ ಪೈದೊಡ್ಡಿ ಗ್ರಾಮ ಹೊರವಲಯದಲ್ಲಿ ನಡಿದಿದೆ. ಘಟನೆಯಲ್ಲಿ ಯರಜಂತಿ ಗ್ರಾಮದ ನರಸಪ್ಪ (28) ಸ್ಥಿತಿ ಗಂಭೀರವಾಗಿದ್ದು, ಜಾಲೇರದೊಡ್ಡಿಯ ಮಹಾದೇವಿ (17) ಸಾವನ್ನಪ್ಪಿದ್ದಾಳೆ.ಕೆಲ ತಿಂಗಳ ಹಿಂದೆ ಇವರಿಬ್ಬರೂ ಪರಾರಿಯಾಗಿದ್ದರು ಎನ್ನಲಾಗಿದ್ದು, ಮಹಾದೇವಿಗೆ 18 ವರ್ಷ ತುಂಬಿದ ಬಳಿಕ ವಿವಾಹ ಮಾಡಿಸುವದಾಗಿ ಮಹಿಳಾ ಸಾಂತ್ವನ ಕೇಂದ್ರದವರು ತಿಳಿಸಿದ್ದರು ಎನ್ನಲಾಗಿದೆ. ಆದರೆ ವಿವಾಹಿತನೊಂದಿಗೆ ಮಗಳ ಪ್ರೀತಿ ವಿಚಾರ ತಿಳಿದ ಮಹಾದೇವಿ ಪಾಲಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.ಶನಿವಾರ ಇವರಿಬ್ಬರೂ ಪೈದೊಡ್ಡಿ ಗ್ರಾಮ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೈ ಮೇಲೆ ಒಬ್ಬರಿಗೊಬ್ಬರು ತಮ್ಮ ತಮ್ಮ ಹೆಸರುಗಳನ್ನು ಬರೆದುಕೊಂಡಿದ್ದಾರೆ.ಸದ್ಯ ನರಸಪ್ಪನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share and Enjoy !

Shares