ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ನೌಕರರಿಂದ ಮನವಿ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸುಗೂರು:ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿ ಸಾರಿಗೆ ನೌಕರರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಮನವಿ ಸಲ್ಲಿಸಿದರು.
೧.೫ ಲಕ್ಷ ನೌಕರರು ಹಗಲಿರುಳು, ಹಬ್ಬ ಹರಿದಿನಗಳೆನ್ನದೇ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಇಲಾಖೆ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಆದರೆ ಇಂತಹ ಕಾರ್ಮಿಕರು ಮನವಿ ನೀಡಲು ಹೋದಾಗ ಕಾರ್ಮಿಕ ಮುಖಂಡರನ್ನು ಅವಮಾನಿಸಿರುವುದು ಸರಿಯಾದ ಕ್ರಮವಲ್ಲ. ಇದನ್ನು ಕಾರ್ಮಿಕರು ತೀವ್ರವಾಗಿ ಖಂಡಿಸುತ್ತಾರೆ. ಕಳೆದ ೨೮ ವರ್ಷಗಳಿಂದ ಸಾರಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದೇ ನಿರ್ಲಕ್ಷö್ಯ ಮಾಡಲಾಗಿದೆ. ಕಾರಣ ತಾವುಗಳು ಸರ್ಕಾರಕ್ಕೆ ಮನವರಿಕೆ ಮಾಡಿ ಸಾರಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಸಾರಿಗೆ ಕಾರ್ಮಿಕರಾದ ಆದಪ್ಪ ದೊಡ್ಡಿಹಾಳ ಈಚನಾಳ, ಭೀಮಪ್ಪ ಜೂಲಗುಡ್ಡ, ಮಲ್ಲಿಕಾರ್ಜುನ, ಬಸಪ್ಪ, ಮಲ್ಲಪ್ಪ, ಶಿವಲಿಂಗಪ್ಪ, ಮೌನೇಶ ಸೇರಿ ಇತರರು

Share and Enjoy !

Shares