ಕುರುಗೋಡು:ಸರಕಾರಿ ನೌಕರರೆಂದು ಪರಿಗಣಿಸುವಂತೆ ಸಾರಿಗೆ ನೌಕರರು ಕೈಗೊಂಡಿರುವ ಪ್ರತಿಭಟನೆ ಮುಸ್ಕರವೂ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಕುರುಗೋಡಿಗೆ ಬಾರಿ ಬಿಸಿ ಮುಟ್ಟಿದೆ. ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಮಾಡಲು ಸರಕಾರ ಒಪ್ಪದೇ ಇರುವುದರಿಂದ ಪ್ರತಿಭಟನೆ ತೀವ್ರ ಗಗನಕ್ಕೆ ಏರುತ್ತಿದೆ ಈ ನಿಟ್ಟಿನಲ್ಲಿ ಕುರುಗೋಡಲ್ಲಿ ಸಂಪೂರ್ಣ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತುಂಬಾ ಪರದಾಡುತಿದ್ದರೆ. ಇನ್ನೂ ಪಟ್ಟಣದಲ್ಲಿ ಬಸ್ ಸಂಚಾರ ಇಲ್ಲದ ಕಾರಣ ಪ್ರಯಾಣಿಕರು ಖಾಸಗಿ ಆಟೋ ವಾಹನದಲ್ಲಿ ಚಲಾಯಿಸಲು ಮುಗಿ ಬಿದ್ದಿದ್ದಾರೆ . ಅದರಂತೆ ಖಾಸಗಿ ವಾಹನದಲ್ಲಿ ಚಲಾಯಿಸಲು ತುಂಬಾ ಡಿಮ್ಯಾಂಡ್ ಆಗಿದೆ. ಇನ್ನೂ ಕೆಲ ಪ್ರಯಾಣಿಕರು ಬಸ್ ಸಂಚಾರ ಇಲ್ಲದೆ ಬಸ್ ನಿಲ್ದಾಣದಲ್ಲೇ ಮಲಗಿ ಕೊಂಡಿದ್ದಾರೆ. ಪ್ರಯಾಣಿಕರು ಬೇರೆ ಕಡೆ ತೆರಳಲು ಪ್ರತಿಯೊಂದಕ್ಕೂ ತೊಂದರೆ ಅನುಭವಿಸಬೇಕಾಗಿದೆ. ಅಲ್ಲದೆ ಗರ್ಭಣಿಯರು ಆಸ್ಪತ್ರೆ ಗೆ ಹೋಗುವುದಕ್ಕೆ ಕಷ್ಟಕರ ವಾಗಿದೆ.