ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸಗೂರು:ತಾಲೂಕಿನ ಸುಕ್ಷೇತ್ರ ಅಂಕಲಿಮಠ ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಬೇಟಿ ನೀಡಿ ನಿರುಪಾಧೀಶ್ವರ ಗದ್ದುಗೆಯ ದರ್ಶನ ಪಡೆದು ಆಶೀರ್ವಾದ ಪಡೆದರು.
ಲಿಂಗಸಗೂರು ಪಕ್ಷದ ಕಾರ್ಯಕ್ರಮ ದ ಹಿನ್ನಲೆಯಲ್ಲಿ ಆಗಮಿಸಿದ್ದ ಬಿಜೆಪಿ ರಾಜ್ಯದ್ಯಕ್ಷ ನಳೀನ್ ಕುಮಾರ ಕಟೀಲ್
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಮಠದ ದಿಂದ ನಿರಂತರ ಅನ್ನದಾಸೋಹ ಮಾಡುತ್ತಿರುವದು ಶ್ರೀ ಮಠದ ಭಕ್ತರು ನಾವು ನೀವೆಲ್ಲರೂ ಪುಣ್ಯವಂತರು ಎಂದರು
ನಾಡಿನಲ್ಲಿ ಇಂತಹ ಪುಣ್ಯ ಕ್ಷೇತ್ರ ಗಳು ಸಮಾಜದ ಒಳಿತಿಗಾಗಿ ನಿರಂತರ ಸೇವೆ ಮಾಡುತ್ತಿವೆ ಎಂದರು.
ಶ್ರೀ ಮಠದ ಪೂಜ್ಯರಾದ ವೀರಭದ್ರ ಮಹಾಸ್ವಾಮಿಗಳು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ,ಹಾಗೂ ಕೊಪ್ಪಳ ,ಬಳ್ಳಾರಿ, ಸಂಸದರಿಗೆ ಹಾಗೂ ಮಾನಪ್ಪ ವಜ್ಜಲ್ ಹಟ್ಟಿ ಚಿನ್ನದ ಗಣಿಯ ಕಂಪನಿಯ ಅಧ್ಯಕ್ಷರಿಗೆ ಇದೆ ಸಂದರ್ಭದಲ್ಲಿ ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಶ್ರೀ ಮಠದ ಪರಮಪೂಜ್ಯ ವೀರಭದ್ರ ಮಹಾ ಸ್ವಾಮಿಗಳು ,ಹಾಗೂ ಕಿರಿಯ ಶ್ರೀಗಳು ,ಹಾಗೂ ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ,ಬಳ್ಳಾರಿ ಸಂಸದರಾದ ವೈ. ದೇವಿಂದ್ರಪ್ಪ, ಲಿಂಗಸಗೂರು ಮಾಜಿ ಶಾಸಕರು ಹಾಗೂ ಹಾಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಅದ್ಯಕ್ಷರು ಆದ ಮಾನಪ್ಪ ವಜ್ಜಲ್,ಬಿಜೆಪಿ ಮುಖಂಡ ಡಾ.ಶಿವಬಸಪ್ಪ ಸಂತೆಕೆಲ್ಲೂರು ,ಬಿಜೆಪಿ ಪಕ್ಷದ ಮುಖಂಡರು ,ಕಾರ್ಯಕರ್ತರು ಉಪಸ್ಥಿತರಿದ್ದರು