27ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲಿದ್ದಾರೆ:ಶಾಸಕ ಬಿ.ನಾಗೇಂದ್ರ ವಿಶ್ವಾಸ

 

ವಿಜಯನಗರವಾಣಿ ಸುದ್ದಿ :

ಸಿರುಗುಪ್ಪ : ನಗರದ ಬಿಡಿಸಿಸಿ ಬ್ಯಾಂಕ್ ಸಮಾಭಂಗಣದಲ್ಲಿ ತಾಲೂಕು ಉಸ್ತುವಾರಿ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿದರು.

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ತಾಲೂಕಿನ 27 ಗ್ರಾ.ಪಂಚಾಯಿತಿಗಳಲ್ಲಿ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿ ಅಧಿಕಾರ ಹಿಡಿಯಲಿದ್ದಾರೆ, ಮಾಜಿ ಶಾಸಕ ಬಿ.ಎಂ.ನಾಗರಾಜ ಮತ್ತು ನನಗೆ ನಮ್ಮ ಕಾಂಗ್ರೇಸ್ ಪಕ್ಷದ ರಾಜ್ಯಾಧ್ಯಕ್ಷರು ಗ್ರಾಮ ಪಂಚಾಯಿತಿ ಚುನಾವಣೆಯ ಉಸ್ತುವಾರಿಯನ್ನು ನೀಡಿದ್ದು, ಪ್ರತಿ ಗ್ರಾಮದ ಮುಖಂಡರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಗೆಲುವಿಗಾಗಿ ಶ್ರಮಿಸಲಾಗುವುದು.

ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ಮುಖಂಡರು ತಮ್ಮಲ್ಲಿನ ಯಾವುದೇ ಬಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗಿಟ್ಟು ಈ ಚುನಾವಣೆಯನ್ನು ಪ್ರತಿಷ್ಟೆಯನ್ನಾಗಿ ತೆಗೆದುಕೊಂಡು ನಮ್ಮ ರಾಜ್ಯದ ಕಾಂಗ್ರೇಸ್ ಪಕ್ಷ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯನ್ನು ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸಬೇಕು, ಚುನಾವಣೆಯಲ್ಲಿ ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ನಂತರ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ತಾಲೂಕು ಉಸ್ತುವಾರಿ ಬಿ.ಎಂ.ನಾಗರಾಜ, ಮಾಜಿ ಶಾಸಕ ಟಿ.ಎಂ.ಚAದ್ರಶೇಖರಯ್ಯಸ್ವಾಮಿ, ಪರಾರ್ಜಿತ ಅಭ್ಯರ್ಥಿ ಮುರಳಿಕೃಷ್ಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕರಿಬಸಪ್ಪ, ನಗರಸಭೆ ಅಧ್ಯಕ್ಷ ಡಿ.ನಾಗರಾಜ, ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ, ಬಿ.ಎಂ.ಸತೀಶ, ಗೋಪಾಲರೆಡ್ಡಿ, ನೂರುಲ್ಲಾಖಾನ್, ಪಿ.ತಿಮ್ಮಪ್ಪ, ಚಿದಾನಂದರಾಯುಡು, ಎಸ್.ನರೇಂದ್ರಸಿಂಹ, ಎಚ್.ರಾಮನಾಥ, ಮಹೇಶಗೌಡ ಇದ್ದರು.

Share and Enjoy !

Shares