ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು :ತಾಲೂಕಿನ ಗುರುಗುಂಟಾ ಗ್ರಾಮ ಹೊರವಲಯದಲ್ಲಿ ಎನ್‌ಆರ್‌ಬಿಸಿ ಮುಖ್ಯ ಕಾಲುವೆಯಲ್ಲಿ ಈಜಲು ತೆರಳಿದ್ದ ಇಬ್ಬರು ನಾಪತ್ತೆಯಾಗಿದ್ದಾರೆಕಾಲುವೆಯಲ್ಲಿ ಈಜಲು ತೆರಳಿದ್ದ ಇಬ್ಬರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮ ಹೊರವಲಯದಲ್ಲಿ ಎನ್‌ಆರ್‌ಬಿಸಿ (ನಾರಾಯಣಪುರ ಬಲದಂಡೆ ಕಾಲುವೆ) ಮುಖ್ಯ ಕಾಲುವೆಯಲ್ಲಿ ಘಟನೆ ನಡೆದಿದೆ. ಕಲಬುರಗಿ ಮೂಲದ ವೆಂಕಟೇಶ್ ಹಾಗೂ ಬಾಬು ಎಂಬುವವರು ಕಾಲುವೆಯಲ್ಲಿ ನಾಪತ್ತೆಯಾದವರು ಎಂದು ಹೇಳಲಾಗುತ್ತಿದೆ.ಇಂದು ಬೆಳಿಗ್ಗೆ ಬಾಬು, ವೆಂಕಟೇಶ್ ಹಾಗೂ ಕುಟುಂಬಸ್ಥರು ಕಲಬುರಗಿಯಿಂದ ಗಂಗಾವತಿಗೆ ತೆರಳಿದ್ದರು. ಅಲ್ಲಿ ವೆಂಕಟೇಶ್ ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ಬಾಬು, ವೆಂಕಟೇಶ್ ವಾಪಸ್ ಆಗುತ್ತಿದ್ದರು. ಈ ನಡುವೆ ಮಾರ್ಗ ಮಧ್ಯೆ ಇರುವ ಕಾಲುವೆಯನ್ನು ಕಂಡು ಈಜಲು ತೆರಳಿದ್ದರು ಎನ್ನಲಾಗುತ್ತಿದೆ.