ಲಿಂಗಸುಗುರು : ಹಟ್ಟಿ ಚಿನ್ನದಗಣಿ ಕಂಪನಿಯ ಅಧ್ಯಕ್ಷರಾದ ಮಾನಪ್ಪ ಡಿ ವಜ್ಜಲ್ ಅವರನ್ನು ಇಂದು ಹಟ್ಟಿಕಾರ್ಮಿಕರು ಅಧ್ಯಕ್ಷರನ್ನು ಭೇಟಿ ಮಾಡಿ ತಮಗೆ ವಿತರಣೆ ಯಾಗಬೇಕಾದ ಬೋನಸ್ ಮತ್ತು ಪಿ ಎಲ್ ಐ ಬಿ ಮೊತ್ತವನ್ನು ಶೀಘ್ರದಲ್ಲಿ ವಿತರಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಮಾನಪ್ಪ ಡಿ ವಜ್ಜಲ್ ಮಾತನಾಡಿ.ಅಧ್ಯಕ್ಷರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತನಾಡಿ ಕಾರ್ಮಿಕರಿಗೆ ಬರಬೇಕಾದ ಬೋನಸ್ಸ್ ಮತ್ತು ಪಿ ಎಲ್ ಐ ಬಿ ಮೊತ್ತವನ್ನು ಪಾವತಿಸಲು ಆದೇಶಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ. ಹಟ್ಟಿಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಮುಖಂಡರಾದ ಗುಡದಪ್ಪ ಭಂಡಾರಿ, ಮುರಳಿ ಮೋಹನ್, ಚನ್ನಪ್ಪ, ಮೆಹಬೂಬ್ ಬೈಚಬಾಳ, ಶೌಕತ್ ಅಲಿ ರಾಘವೇಂದ್ರ, ಹನುಮಂತಗೌಡ ಗುರಿಕಾರ್ ಮತ್ತು ಜೈನುದ್ದಿನ್, ಮಹ್ಮದ್ ರಫಿ, ಡಿ ಕೆ ಲಿಂಗಸೂಗೂರು
ಹಾಗೂ ಬಿಜೆಪಿ ಹಟ್ಟಿ ಘಟಕದ ಅಧ್ಯಕ್ಷರಾದ ಗುಂಡಪ್ಪ ಗೌಡ ಗುರಿಕಾರ್ ಮತ್ತು ಶಿವರಾಜ್ ಗೌಡ ಗುರಿಕಾರ್ ಈ ಸಂದರ್ಭದಲ್ಲಿ ಹಾಜರಿದ್ದರು.