ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು:ಮುದಗಲ್ ಪಟ್ಟಣದ ಸಮೀಪದ ಮಟ್ಟೂರು ಗ್ರಾಮ ಪಂಚಾಯಿತಿ ಚುನಾವಣೆಗೆ ಎರಡನೇ ವಾರ್ಡಿನ ಅಭ್ಯರ್ಥಿಯಾಗಿ ಯುವ ಪತ್ರಕರ್ತ ಹನುಮಂತ ನಾಯಕ ಸೋಮವಾರ ಮುಂಜಾನೆ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬೆಂಬಲಿಗರ ಜೊತೆ ವಿಶೇಷ ಪೂಜೆ ಮಾಡಿಸಿ ನಂತರ ಯುವ ಬೆಂಬಲಿಗರ ಜೊತೆ ಚುನಾವಣೆ ಅಧಿಕಾರಿ ನಾಗರಾಜ್ ಅವರಿಗೆ ನಾಮಪತ್ರ ಸಲ್ಲಿಸಿದರು. ಕಳೆದ ಎಂಟು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಲ್ಲಿಸುತ್ತಾ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಅವ್ಯವಹಾರಗಳನ್ನು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಆಡಳಿತ ನಿರ್ಲಕ್ಷ್ಯ, ಹಣ ದುರ್ಬಳಕೆ ಮಾಡಿದ ಅಧಿಕಾರಿಗಳ ವಿರುದ್ಧ ಅಧಿಕಾರಿಗಳ ವಿರುದ್ಧ ಸುದ್ದಿಗಳು ಬಿತ್ತರಿಸುವ ಮೂಲಕ ಸರ್ಕಾರದ ಗಮನಕ್ಕೆ ತಂದರು ಪ್ರಯೋಜನವಾಗದ ಕಾರಣ ಈ ಬಾರಿ ತಾವೇ ಗ್ರಾಮಪಂಚಾಯತ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ, ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಗ್ರಾಮದ ಜನರಿಗೆ ಕೆಲಸ ನೀಡುವ ಮೂಲಕ ಅವರಿಗೆ ಗುಳೆ ಹೋಗದಂತೆ ತಡೆಯುವ ಯೋಜನೆ ಹಾಗೂ ಮೂಲಭೂತ ಸೌಕರ್ಯಗಳಾದ ನೀರು, ಚರಂಡಿ, ಸಿಸಿ ರಸ್ತೆ ಇನ್ನೂ ಹಲವಾರು ಹೊಸ ಯೋಜನೆಗಳನ್ನು ರೂಪಿಸಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಸರಕಾರದ ಯೋಜನೆಗಳನ್ನು ಗ್ರಾಮಸ್ಥರಿಗೆ ತಿಳಿಸುವುದರ ಮೂಲಕ ಉತ್ತಮ ಕಾರ್ಯಗಳನ್ನು ಮಾಡುವ ಮುಂಚೂಣಿಯಲ್ಲಿದ್ದಾರೆ ಎಂದು ಸಾರ್ವಜನಿಕರ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಈ ಸಂದರ್ಭದಲ್ಲಿ ಮಂಜುನಾಥ, ಸಹದೇವ, ಸಂಗಮೇಶ ಕಾರ್ಯದರ್ಶಿ ಎಸ್ ವಿ ಎಮ್ ಪ್ರೌಢಶಾಲೆ, ಅಮರೇಶ್ ಮಡಿವಾಳ ರಾಜ್ಯ ಸಂಘಟನಾ ಕಾರ್ಯದರ್ಶಿ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ, ಯಮನೂರ್ ನಾಯಕ್ ಶರಣಪ್ಪ ಬುದ್ದಿನ್ನಿ, ಹನುಮಂತ ಸೇರಿದಂತೆ ಮಟ್ಟೂರಿನ ಯುವಕರು ಗ್ರಾಮಸ್ಥರು ಇದ್ದರು