ಕೃಷಿ ವಿವಿ ಅಕ್ರಮ ನೇಮಕಾತಿ: ಡಾ.ಹನುಮಂತ ನಾಯಕಗೆ ಜಯ

 

ರಾಯಚೂರು:ಕೃಷಿ ವಿಶ್ವಾವಿದ್ಯಾಲಯದ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ಅನ್ಯಾಯಕ್ಕೊಳಗಾದ ಡಾ.ಹನುಮಂತ ನಾಯಕ ಮತ್ತು ಇತರ ಅಭ್ಯರ್ಥಿಗಳಿಗೆ ನ್ಯಾಯ ನೀಡಲಾಗಿದ್ದು ಅಕ್ರಮಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸರ್ಕಾರಕ್ಕೆ ಆಗಿರುವ ನಷ್ಟ ತುಂಬಿಕೊಳ್ಳವಂತೆ ಹೈದರಾಬಾದ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ್ ನಾಯಕ ಆಗ್ರಹಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಕ್ರಮ ನೇಮಕಾತಿ ರದ್ದುಗೊಳಿಸಿದ್ದು ವಾಲ್ಮೀಕ ನಾಯಕ ಸಂಘದ ಹೋರಾಟ ಪ್ರತಿಫಲವಾಗಿದೆ. ಈ ಹೋರಾಟಕ್ಕೆ ಮಣಿದು ಅಂದಿನ ಕೃಷಿ ಸಚಿವ ಶಿವಶಂಕರೆಡ್ಡಿ ಅವರು ಡಾ.ಶೀಲವಂತರ ಅಧ್ಯಕ್ಷತೆಯಲ್ಲಿ ತನಿಖೆಗೆ ಆದೇಶಿಸಿದ್ದರು. ಈ ತಂಡವು ಸುಮಾರು 564 ಪುಟಗಳ ವರದಿ ನೀಡಿ ಅಕ್ರಮದ ಬಗ್ಗೆ ಹೇಳಿತ್ತು. ಈ ಆಧಾರದ ಮೇಲೆ ಅನ್ಯಾಯಕ್ಕೊಳಪಟ್ಟ ಡಾ.ಹನುಮಂತ ನಾಯಕ ಸೇರಿ ಇನ್ನಿತರಿಗೆ ನ್ಯಾಯ ಸಿಕ್ಕಂತಾಗಿದೆ. ಈಗಾಗಲೇ ಮೂರು ವರ್ಷಗಳಿಂದ ಅಕ್ರಮದಡಿ ನೇಮಕಾತಿ ಹೊಂದಿರುವವರ ಬಗ್ಗೆ ಮುತುವರ್ಜಿ ವಹಿಸಿಬೇಕಿದೆ. ಇವರಿಗೆ ಸಂಬಳ ನೀಡಿದ್ದರ ಬಗ್ಗೆ ಮತ್ತು ಮುಂದಿನ ಅವರ ಭವಿಷ್ಯದ ಬಗ್ಗೆ ಯೋಚಿಸಬೇಕಾಗಿದೆ. ಈ ನೇಮಕಾತಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅವರ ವೇತನದಲ್ಲಿ ಭರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಾಯಕ, ಹನುಮಂತ ನಾಯಕ, ಶ್ರೀಹರಿ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares