ಯಶಸ್ವಿ ಮತದಾನಕ್ಕೆ ಚುನಾವಣೆ ಪ್ರಕ್ರಿಯೆಗಳಿಗೆಅತ್ಯಂತಮುಖ್ಯ :ಜಿಲ್ಲಾಧಿಕಾರಿಆರ್ ವೆಂಕಟೇಶ್

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ರಾಯಚೂರು:ಶಾಂತಿಯುತ ಮತದಾನಕ್ಕೆ ಯಶಸ್ವಿ ಚುನಾವಣೆ ಪ್ರಕ್ರಿಯೆಗಳಿಗೆ ಅತ್ಯಂತ ಮುಖ್ಯವೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಹೇಳಿದರು.
ಇಂದು ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯತ್ ಚುನಾವಣೆ 2020,ಪಿಆರ್ ಒ,ಮತ್ತು ಎಪಿ ಆರ್ ಓ ಗಳಿಗೆ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ 330 ಗ್ರಾಮ ಪಂಚಾಯತಗಳ ಸಾರ್ವತ್ರಿಕ ಚುನಾವಣೆ ಎರಡು ಹಂತದಲ್ಲಿ ನಡೆಯುತ್ತಿದ್ದು ಮೊದಲ ಹಂತದಲ್ಲಿ ಡಿ.22ರಂದು ನಡೆಯಲಿದ್ದು, ಒಟ್ಟು ಎರಡು ಹಂತದಲ್ಲಿ ಗ್ರಾಮಪಂಚಾಯತಿಗಳ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಚುನಾವಣಾ ಸಿಬ್ಬಂದಿಗಳಿಗೆ ನೋಡಿದ ತರಬೇತುದಾರರಿಂದ ತರಬೇತಿ ನೀಡಲಾಗುವುದು ಅದರ ಸದುಪಯೋಗ ಚುನಾವಣೆ ಸಿಬ್ಬಂದಿಗಳು ಪಡೆದು ಯಶಸ್ವಿ ಚುನಾವಣೆ ನಡೆಸಬೇಕು.
ಎಷ್ಟು ತರಬೇತಿ ಅನುಭವವಿದ್ದರೂ ಹೊಸತನ್ನು ಕಲಿಯುವುದು ಅಗತ್ಯವಿರುತ್ತದೆ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಗೈರಾಗದೆ ಶೇ.100ರಷ್ಟು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಅನಗತ್ಯವಾಗಿ ಗೈರದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ದುರ್ಗೆಶ್, ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares