ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆ ವಿರುದ್ಧ ಕೋಲಾರ ಸಂಸದ ಮುನಿಸ್ವಾಮಿ ರವರ ರಾಜಕೀಯ ಪ್ರೇರಿತ ಆರೋಪ ಖಂಡಿಸಿ ಎಸ್.ಎಫ್.ಐ ಮತ್ತು ಡಿ.ವೈ.ಎಪ್.ಐ ರಾಜ್ಯಾದ್ಯಂತ ಪ್ರತಿಭಟನೆ

 

ವಿಜಯನಗರ ವಾಣಿ
ರಾಯಚೂರು ಜಿಲ್ಲೆ

ಸಿರವಾರ:ತಾಲೂಕಿನ ಕವಿತಾಳ ಪಟ್ಟಣದಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಅವರ ರಾಜಕೀಯ ಪ್ರೇರಿತ ಆರೋಪ ಖಂಡಿಸಿ ಎಸ್ ಎಫ್ ಐ ಪ್ರತಿಭಟನೆ.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ್ ಮ್ಯಾಗಳಮನಿ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಐಫೋನ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರ ವೇತನ ಸಮಸ್ಯೆ ಬಗೆಹರಿಸಲು ಶನಿವಾರ ಬೆಳಗ್ಗೆ ಕಾರ್ಮಿಕರು ಧಿಡೀರ್ ಪ್ರತಿಭಟನೆ ನಡೆಸಿದ್ದಾರೆ ಆದರೆ ಈ ಘಟನೆಗೆ ಎಸ್ ಎಫ್ ಐ ಗೆ ಸಂಬಂಧವಿಲ್ಲದಿದ್ದರೂ
ಎಸ್ ಎಫ್ ಐ ಸಂಘಟನೆ ಹೊರರಾಜ್ಯದ ಜನರನ್ನು ಕರೆಸಿಕೊಂಡು ದಾಂದಲೆ ಯನ್ನು ಸಂಘಟಿಸಿದೆ ಎಂದು ಕೋಲಾರದ ಸಂಸದ ಮುನಿಸ್ವಾಮಿ ರಾಜಕೀಯ ಪ್ರೇರಿತ ಆರೋಪ ಮಾಡಿ ನಿಷ್ಪಕ್ಷಪಾತ ತನಿಖೆ ಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿ
ಎಸ್ ಎಫ್ ಐ ಇದರ ವಿದ್ಯಾರ್ಥಿ ಸಂಘಟನೆ ನಾಯಕ ಶ್ರೀಕಾಂತ್ ರವರನ್ನು ಬಂಧಿಸಿದನು ಎಸ್ ಎಫ್ ಐ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಎಸ್ ಎಫ್ ಐ ಯಾವುದೇ ಪ್ರತಿಭಟನೆಯನ್ನು ಸಂಘಟಿಸಿಲ್ಲರಲಿಲ್ಲ
ಎಸ್ ಎಫ್ ಐ ಒಂದು ವಿದ್ಯಾರ್ಥಿ ಸಂಘಟನೆಯಾಗಿದ್ದು ಅದು ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಹೋರಾಡುತ್ತಿದೆ ಆದರೆ ಇಲ್ಲಿರುವುದು ಕಾರ್ಮಿಕರು ಮತ್ತು ಕೈಗಾರಿಕಾ ಪ್ರಶ್ನೆಯಾದರೂ ಅನವಶ್ಯಕವಾಗಿ ವಿದ್ಯಾರ್ಥಿ ಸಂಘಟನೆಯ ಹೆಸರನ್ನು ಎಳೆದು ತರುವ ಪ್ರಯತ್ನವನ್ನು ಸಂಸದರು ನಡೆಸಿರುವುದು ಅವರ ಬೇಜವಾಬ್ದಾರಿತನ ತೋರುತ್ತದೆ ಮತ್ತು
ಎಸ್ ಎಫ್ ಐ ನಾಯಕ ಶ್ರೀಕಾಂತ್ ಇದುವರೆಗೂ ಯಾವುದೇ ಎಫ್ ಐ ಆರ್ ದಾಖಲೆ ಆಗಿಲ್ಲ ಇದು ಬಿಜೆಪಿ ಮತ್ತು ಆರೆಸ್ಸೆಸ್ ಅಣತಿಯಂತೆ ಕೋಲಾರದ ಸಂಸದ ಮುನಿಸ್ವಾಮಿ ಅವರ ದುರುದ್ದೇಶಪೂರಿತ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಎಸ್ ಎಫ್ ಐ ಶ್ರೀಕಾಂತ್ ರವರನ್ನು ವಿಚಾರಣೆಯ ಉದ್ದೇಶದಿಂದ ಬಂಧಿಸಿ ವಿಚಾರಣೆ ನಡೆಸಿ ಯಾವುದೇ ಗುರುತರವಾದ ಪಾತ್ರವಿಲ್ಲ ಎಂದು ತಿಳಿದ ಮೇಲೆ ಬಿಡುಗಡೆ ಮಾಡಿದ್ದಾರೆ ಆದರೂ ಸಹ ಬಿಜೆಪಿ ಮತ್ತು ಆರೆಸ್ಸೆಸ್ ಶಕ್ತಿಗಳ ಸಾಮಾಜಿಕ ಮಾಧ್ಯಮಗಳಲ್ಲಿ ಎಸ್ ಎಫ್ ಐ ವಿರುದ್ಧ ಅಪಪ್ರಚಾರ ನಡೆಸಿ ಎಸ್ ಎಫ್ ಐ ಸಂಘಟನೆಗೆ ಕೆಟ್ಟ ಹೆಸರು ತರಲು ಹೊರಟಿರುವುದು ಸರಿಯಲ್ಲ.
ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆಯ ಹೆಸರನ್ನು ದುರುದ್ದೇಶಪೂರ್ವಕವಾಗಿ ನಡೆದು ತರುವುದರ ಹಿಂದೆ ಬಿಜೆಪಿ ಮತ್ತು ಆರೆಸ್ಸೆಸ್ ರಾಜಕೀಯ ಸೈದ್ಧಾಂತಿಕ ವಿರೋಧಿ ನಿಲುವೇ ಕಾರಣವಾಗಿದೆ. ಆದ್ದರಿಂದ ಮುನಿಸ್ವಾಮಿಯವರು ಎಸ್ ಎಫ್ ಐವಿದ್ಯಾರ್ಥಿ ಸಂಘಟನೆ ವಿರುದ್ಧ ಮಾಡಿರುವ ಆರೋಪವನ್ನು ಈ ಕೂಡಲೇ ಬೇಷರತ್ತಾಗಿ ಹಿಂಪಡೆಯಬೇಕು ಮತ್ತು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಮಿಕರ ಹಿತ ಕಾಪಾಡಬೇಕೆಂದು
ಎಸ್ ಎಫ್ ಐ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಲಿಂಗರಾಜ್ ಕಂದಗಲ್ ಜಿಲ್ಲಾ ಕಾರ್ಯದರ್ಶಿ ( ಎಸ್ ಎಫ್ ಐ ) ಮೌನೇಶ್ ಬುಳ್ಳಾಪುರ ಅಧ್ಯಕ್ಷರು ನಗರ ಘಟಕ ( ಎಸ್ ಎಫ್ ಐ ) ಎಮ್ ರಫಿಕ್ ಬೋದಲ್ ಅದ್ಯಕ್ಷರು ( ಡಿ ವೈ ಎಪ್ ಐ ) ನಗರಫಟಕ ಮತ್ತು ವೆಂಕಟೇಶ್ ಕಾರ್ಯದರ್ಶಿ ( ಎಸ್ ಎಫ್ ಐ ) ನಾಗಮೋಹನ್ ಸಿಂಗ್ ಉಪಾಧ್ಯಕ್ಷರ ( ಎಸ್ ಎಫ್ ಐ ) ಮಲ್ಲಿಕಾರ್ಜುನ್ , ನಾಗರಾಜ್ ಉಪಸ್ಥಿತರಿದ್ದರು

Share and Enjoy !

Shares