ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರ :ತಾಲ್ಲೂಕಿನ ಗುರುಗುಂಟ ಸಮೀಪದ ಗೌಡೂರೂ ಗ್ರಾಮದ ಹೊರವಲಯದಲ್ಲಿ ಅನಾಮದೇಯ ಶವ ಪತ್ತೆಯಾದ ಘಟನೆ ನಡೆದಿದೆ. ಶವ ಸುಟ್ಟ ಪರಿಸ್ಥಿತಿಯಲ್ಲಿ ದೊರೆತ ಕಾರಣ ಯಾವುದೇ ಸುಳಿವು ಸಿಗುತ್ತಿಲ್ಲ. ಮೃತ ವ್ಯಕ್ತಿಯ ವಯಸ್ಸು 45 ರಿಂದ 60 ಇದೆ ಎಂದು ಅಂದಾಜಿಸಲಾಗಿದೆ ಇನ್ನು ಯಾವುದೇ ಗುರುತು ಪರಿಚಯ ಸಿಗದೇ ಇದ್ದ ಕಾರಣ ಸುತ್ತಮುತ್ತಲಿನ ಅಥವಾ ತಾಲೂಕಿನಲ್ಲಿ ಯಾರಾದರೂ ಕಾಣೆಯಾದವರ ಬಗ್ಗೆ ಮಾಹಿತಿ ಇದ್ದರೆ ಗ್ರಾಮಸ್ಥರಲ್ಲಿ ಸಾರ್ವಜನಿಕರಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಮಾಹಿತಿ ನೀಡಿದ್ದಾರೆ.