ವಿಜಯನಗರವಾಣಿ ಸುದ್ದಿ
ರಾಯಚೂರು:ರಾಜ್ಯ ಸರ್ಕಾರ ಡಿ.15 ರಿಂದ ಎಪಿಎಂಸಿ ಶುಲ್ಕವನ್ನು ಶೇ 1 ರೂ ಹೆಚ್ಚಳ ಮಾಡಿರುವ ನಿರ್ಧಾರ ಖಂಡಿಸಿ ಡಿ.17ರಿಂದ ಎಪಿಎಂಸಿ ವರ್ತಕರು ವ್ಯಾಪಾರ ವಹಿವಾಟು ಬಂದ್ ಮಾಡಿ ಸರ್ಕಾರದ ತೀರ್ಮಾನನ್ನು ಖಂಡಿಸಿದ್ದ ಕಾರಣ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತುರ್ತು ಸಭೆ ನಡೆಸಲಾಯಿತು.
ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ
ಜಿಲ್ಲಾಧಿಕಾರಿ ಅರ್ ವೆಂಕಟೇಶ ಕುಮಾರ ನೇತೃತ್ವದಲ್ಲಿ ತುರ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು
ಎಪಿಎಂಸಿ ಬಂದ್ ಮಾಡಿದ್ದರಿಂದ ರೈತರಿಗೆ ತೀವ್ ಸಮಸ್ಯೆ ಆಗಲಿದೆ.ಇದರಿಂದ ಸಣ್ಣ ರೈತರಿಗೆ ಸಮಸ್ಯೆಯಾಗಿದೆ ಈಗಾಗಲೇ ಸಾಕಷ್ಟು ರೈತರು ಭತ್ತ, ತೊಗರಿ ಎಪಿಎಂಸಿ ಗೆ ತೆಗೆದುಕೊಂಡು ಬಂದಿದ್ದಾರೆ ನಿಮಗೆ ಜಿಲ್ಲಾ ಮಟ್ಟದಲ್ಲು ಜಿಲ್ಲಾಡಳಿತದಿಂದ ಯಾವುದೇ ಬೇಡಿಕೆ ಇದ್ದರೆ ಹೇಳಿ ಬಂದ್ ನಿಂದ ವರ್ತಕರಿಗೂ ನಷ್ಟವಾಗಿದೆ ಎಂದು ಮನವರಿಕೆ ಮಾಡಿದರು.
ಇದಕ್ಕೆ ವರ್ತಕರು, ಫ್ಯಾಕ್ಟರಿ ಮಾಲೀಕರು ಪ್ರತಿಕ್ರಿಯಿಸಿ ರಾಜ್ಯ ಸರ್ಕಾರ ಏಕಾಏಕಿ ಶೇ.35 ಪೈಸೆಯಿಂದ 1ರೂ ಗೆ ಏರಿಕೆ ಮಾಡಿದ್ದರಿಂದ ರೈತರಿಗೆ ಹಾಗೂ ವರ್ತಕರಿಗೂ ಹೊರೆಯಾಗಲಿದೆ. ಈ ಬಗ್ಗೆ ರಾಜ್ಯಸಮಿತಿಯಿಂದ ಡಿ. 23 ರಂದು ಸಭೆನಡೆಯಲಿದೆ ಅಂದು ಮುಂದಿನ ನಿರ್ಧಾರದ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಗಂಜ್ ಮರ್ಚೆಂಟ್ ಅಸೋಸಿಯೇಶನ್, ಫ್ಯಾಕ್ಟರಿ ಅಸೋಸಿಯೇಶನ್ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು