ವಿಜಯನಗರವಾಣಿ ಸುದ್ದಿ
ರಾಯಚೂರು: ಎಸ್ ಕೆಈ ಎಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಎಫ್.ಡಿ.ಎ ಮತ್ತು ಪೋಲಿಸ್ ನೇಮಕಾತಿಗಾಗಿ ಉಚಿತ ಕಾರ್ಯಗಾರ ಹಾಗೂ 25 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಧಾರವಾಡದಲ್ಲಿ ಉಚಿತ ತರಬೇತಿ ನೀಡುವುದಾಗಿ ಎಸ್.ಕೆ.ಇ.ಎಸ್ ಶಿಕ್ಷಣ ಸಂಸ್ಥೆಯ ಸಮೂಹ ಕಾರ್ಯದರ್ಶಿ ಡಾ.ಬಾಬುರಾವ್ ಶೆಗುಣಸಿ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ಪೋಲಿಸ್ ಮತ್ತು ಎಫ್.ಡಿ.ಎ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಗಾಗಿ ಡಿ.24 ರಂದು ಬೆಳಿಗ್ಗೆ 9ಗಂಟೆಗೆ ನಗರದ ಟ್ಯಾಗೂರ್ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಉಚಿತ ಕಾರ್ಯಗಾರವನ್ನು
ಹಮ್ಮಿಕೊಳ್ಳಲಾಗಿದ್ದು, ಕಾರ್ಯಗಾರಕ್ಕೆ ಧಾರವಾಡದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಮೇರು ಅಕಾಡೆಮಿಯ ನಿರ್ದೇಶಕ ಡಾ.ರುದ್ರೇಶ ಮೇಟಿ ಹಾಗೂ ಅವರ ತಂಡ ಆಗಮಿಸಲಿದ್ದಾರೆ. ಅಂದು ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಸ್ಪರ್ಧಾತ್ಮಕ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಎಲ್ಲಾ ಪರೀಕ್ಷೆಗಳಿಗೆ ಕಡ್ಡಾಯವಾಗಿರುವ ಸಮಗ್ರ ಕನ್ನಡ ವಿಷಯದ ಮೇಲೆ ತರಬೇತಿ ಇರಲ್ಲಿದ್ದು, ಇದಕ್ಕಾಗಿ 10 ರೂ ನ್ನು ನಿಗದಿಪಡಿಸಲಾಗಿದೆ. ಡಿ.25 ರಿಂದ 29ರ ವರೆಗೆ ಬೆಳಗ್ಗೆ 10.30 ರಿಂದ ಸಂಜೆ 4 .30 ರ ವರೆಗೆ ಪರೀಕ್ಷೆಗಳಿಗೆ ತರಬೇತಿ ನೀಡಲಿದ್ದು, 5ದಿನ ಕಾರ್ಯಗಾರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಒಂದು ಉಚಿತವಾಗಿ ಟಿ ಶರ್ಟ್ ನೀಡುತ್ತೇವೆ.ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ತಾತ್ಕಾಲಿಕ ಹಾಸ್ಟೇಲ್ ಹಾಗೂ ಸಾರಿಗೆ ವ್ಯವಸ್ಥೆ ಇರಲಿದೆ. ಮುಂಚಿತವಾಗಿ ನೋದಣಿ ಮಾಡಿಸಿದ 300 ಜನ ಅಭ್ಯರ್ಥಿಗಳಿಗೆ ಅವಕಾಶ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7760478421, 8792031604, 8050515659 ಗೆ ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.
ಕೋವಿಡ್- 19 ಲಾಕ್ ಡೌನ್ ನಂತರದ 2ನೇ ಕಾರ್ಯಗಾರ ಇದಾಗಿದ್ದು, ಇದರಿಂದ ಕ್ರಮೇಣ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳ ಒಲವು ಹೆಚ್ಚಲಿದೆ, ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾನಸ ಗ್ರಂಥಾಲಯ ಸಂಪೂರ್ಣ ತೆರೆದಿರುತ್ತದೆ ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ರಾಜಶೇಖರ್, ಕೊಟ್ರೇಶ, ಶಾಲಿನಿ, ಮಾಣಿಕ್ಯಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು