ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿ : ತಾಲ್ಲೂಕಿನ ದೇವಾಂಗ ಸಮುದಾಯವನ್ನು 2 ಎ ಕೆಟಗರಿ ಯಿಂದ ಪರಿಶಿಷ್ಟ ಪಂಗಡ (ಎಸ್ ಟಿ) ಗೆ ಸೇರಿಸುವಂತೆ ಮತ್ತು ದೇವಾಂಗ ಸಮುದಾಯದ
ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಹೆಚ್ಚಿನ ಅನುದಾನ ನೀಡುವುದು ಮತ್ತು ರಾಜಕೀಯವಾಗಿ ಬೆಳೆಯಲು ಅವಕಾಶ ಮಾಡಿಕೊದುವಂತೆ ಆಗ್ರಹಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು .ಇದೇ ಸಂದರ್ಭದಲ್ಲಿ ಮಾತನಾಡಿದ ದೇವಾಂಗ ಸಮುದಾಯದ ತಾಲ್ಲೂಕ ಅಧ್ಯಕ್ಷ ಅಮರಪ್ಪ. ಕೊಪ್ಪರದ ದೇವಾಂಗ ಸಮುದಾಯದವರು ಮೂಲ ಉದ್ಯೋಗ ನೇಕಾರಿಕೆಯಾಗಿದ್ದು ನೇಯ್ಗೆಯಿಂದಲೇ ಜೀವನ ಮಾರ್ಗವಾಗಿದ್ದು , “ ನೇಯ್ಯು ಲಾಳಿಯಿಂದಲೆ ನೇಕಾರರ ಬಾಳು ಲಾಳಿ ತಪ್ಪಿದರೆ ನೇಕಾರರ ಜೀವನವೆ ಹಾಳು ” ಎಂಬಂತೆ ರಾಜ್ಯದಲ್ಲಿ ದೇವಾಂಗ ಸಮುದಾಯವು ರಾಜಕೀಯವಾಗಿ ಅರ್ಥಿಕವಾಗಿ , ಶೈಕ್ಷಣಿಕವಾಗಿ ಅತಿ ಹಿಂದುಳಿದವರಾಗಿರುತ್ತೇವೆ . ಈಗಾಗಲೇ ನಮ್ಮನ್ನು 2 ಎ ಗುಂಪಿಗೆ ಸೇರಿಸಿದ್ದಾಗಿದೆ . ನಮ್ಮ ಸಮುದಾಯವು ಅರ್ಥಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು 2 ಎ ಕೆಟಗೆರಿಯಿಂದ ದೇವಾಂಗ ಸಮುದಾಯವನ್ನು ಪರಿಶಿಷ್ಟ ಪಂಗಡ ( ಎಸ್.ಟಿ ) ಗೆ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು , ಮತ್ತು ನಮ್ಮ ದೇವಾಂಗ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ ನಮ್ಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಮಸ್ಕಿ ತಾಲೂಕ ಹಾಗೂ ಮಸ್ತಿ ಪಟ್ಟಣದ ಸಮಸ್ತ ದೇವಾಂಗ ಸಮಾಜ ಭಾಂದವರು ತಮ್ಮಲ್ಲಿ ವಿನಯ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ . ತಾವುಗಳು ಈ ನಿಟ್ಟಿನಲ್ಲಿ ನಮ್ಮ ಸಮಾಜದ ಜಗದ್ಗುರುಗಳಾದ ಹಂಪಿ ಗಾಯತ್ರಿ ಪೀಠದ್ಯಾಕ್ಷರಾದ ಶ್ರೀಶ್ರೀಶ್ರೀ ದಯಾನಂದ ಪುರಿ ಮಹಾಸ್ವಾಮಿಗಳು ಹಾಗೂ ಹಿರಿಯ ಮುಖಂಡಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬಂದು ನಮ್ಮ ದೇವಾಂಗ ಸಮುದಾಯ ವರ್ಗಕ್ಕೆ ನ್ಯಾಯ ದೊರಕಿಸಿಕೊಡುತ್ತಿರೆಂದು ತಮ್ಮಲ್ಲಿ ವಿನಂತಿಸಿಕಳ್ಳುತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ. ಮಂಜುನಾಥ ಮಾಳಿಗಿ,ಶಿವಶಂಕ್ರಪ್ಪ ಮಾಳಿಗಿ,ಶಂಕ್ರಪ್ಪ ಜೋಗಿನ್,ಗುರುಲಿಂಗಪ್ಪ ಉಳ್ಳಿ,ರವೀಂದ್ರ ಕೊಂಕಲ್,ಮಂಜುನಾಥ ಬಿಜ್ಜಳ,ವಿನೋದ ಹಳ್ಳಿ, ಮಲ್ಲಿಕಾರ್ಜುನ ಸಿಂಗಂಡಿ,ರಾಘವೇಂದ್ರ ಹಳ್ಳಿ,ಮತ್ತು ಸಮಾಜದ ಪ್ರಮುಖ ಮುಖಂಡರು ಹಾಗೂ ದೇವಾಂಗ ದೇವಲ ಮಹಿರ್ಷಿ ಯವಕ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.