ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ:
ಕುರುಗೋಡು : ಸಿರುಗುಪ್ಪ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸೋಮಲಿಂಗಪ್ಪ ಮೂರು ಬಾರಿ ಶಾಸಕರಾಗಿ ಅಧಿಕಾರಕ್ಕೆ ಬಂದ್ರೂ ಏನು ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ ಸಾಬೀತು ಪಡಿಸಲಿ ಬಹಿರಂಗ ಚರ್ಚೆಗೆ ಬರುವೆ ಎಂದು ಮಾಜಿ ಶಾಸಕ ಬಿ. ಎಂ. ನಾಗರಾಜ್ ಹಾಲಿ ಶಾಸಕರಿಗೆ ಸವಾಲು ಹಾಕಿದರು. ಸಮೀಪದ ಮಣ್ಣೂರು ಗ್ರಾಮದಲ್ಲಿ ಗ್ರಾಪಂ ಚುನಾವಣೆ ಅಂಗವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳ ಪರ ಮತಯಾಚಿಸಿ ಮಾತನಾಡಿದ ಅವರು, ಕ್ಷೇತ್ರದ 26 ಗ್ರಾಪಂಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳು ಜಯಶೀಲರಾಗುತ್ತಾರೆ ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು. ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿ ಅಭಿವೃದ್ಧಿ ಯ ಯಶಸ್ಸು ಕಾಣುತ್ತಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಸರಕಾರ ಕಾರಣ, ಬಿಜೆಪಿ ಸರಕಾರದಿಂದ ಯಾವ ಅಭಿವೃದ್ಧಿಯು ಸಾಧ್ಯವಿಲ್ಲ. ಬಹಳ ಅತಿ ಹೆಚ್ಚು ಕೋಮು ಗಲಭೆ, ಜನರ ಶಾಂತಿ ಹದೆಗೆಡಿಸುವ ಕಾರ್ಯಗಳೇ ಆಗಿವೆ. ಚುನಾವಣೆ ಸಂದರ್ಭದಲ್ಲಿ ಬಣ್ಣ ಬಣ್ಣದ ಬುರಡೆ ಮಾತುಗಳನ್ನು ಹೇಳಿ ಮತದಾರರ ಮುಂದೆ ಮತ ಕೇಳಲು ಹೋಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವ್ಯಂಗ್ಯ ನುಡಿದರು. 2008 ರಲ್ಲಿ ಶಂಕರ ರೆಡ್ಡಿ ಯವರು ನನಗೆ ರಾಜಕೀಯ ಜೀವನ ತೋರಿಸಿದವರು. ಅಂದಿನಿಂದ ಇಂದಿನವರೆಗೂ ರಾಜಕೀಯದಲ್ಲಿ ಬಂದು ಜನರ ಸೇವೆ ಮಾಡುವ ಭಾಗ್ಯ ಸಿಕ್ಕಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಣ್ಣ ಪುಟ್ಟ ತಪ್ಪುಗಳು ಆದ್ರೂ ಆಗಿರಬಹುದು ಇದರಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅವಕಾಶ ಸಿಗಲಿಲ್ಲ.ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಕ್ಷೇತ್ರದ ಜನರ ಒಂದು ಕೃಪೆ ಯಿಂದ ಹೈಕಮಾಂಡ್ ಬಿ ಫಾರಂ ನೀಡಿದಲ್ಲಿ ಪಕ್ಷದ ಹಕ್ಕೊತ್ತಾಯಗಳಿಗೆ ಬದ್ಧನಾಗಿರುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳಾದ ಕೋಟೆಹಾಳ್ ಈರಮ್ಮ, ಗಡಿಗಲ್ ಭೀಮಮ್ಮ, ಎನ್. ಬಸವರಾಜ್, ಎಚ್. ಬಸವ, ನೀಲಮ್ಮ, ಛಲವಾದಿ ಮುತ್ತಮ್ಮ, ತಾಪಂ ಸದಸ್ಯ ಸಣ್ಣ ಕರಿಯಪ್ಪ, ಮಾಜಿ ಗ್ರಾಪಂ ಉಪಾಧ್ಯಕ್ಷ ಗಡಿಗಲ್ ಕರಿಯಪ್ಪ, ಗೇಣಿಕೆಹಾಳ್ ಹನುಮಂತ, ಟಿ. ಅಂಜಿನಪ್ಪ, ತಿರುಪತಿ, ಮಾರೆಣ್ಣ, ಬೈರಿ ಗಂಗಯ್ಯ, ಮಳೆ ಈರಣ್ಣ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.