ಹಿರೇನಗನೂರು ವಾರ್ಡ್ ಸಂಖ್ಯೆ ೧ ಎಸ್ ಸಿ ಮೀಸಲು ಕ್ಷೇತ್ರದ ಪುರುಷ ಅಭ್ಯರ್ಥಿ ಮೌನೇಶ ಬೊಮ್ಮನಾಳಾ ಅವಿರೋಧ ಆಯ್ಕೆ

Share and Enjoy !

Shares

 

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ
ಲಿಂಗಸಗೂರು: ತಾಲ್ಲೂಕಿನ ಗುರುಗುಂಟ ಹೋಬಳಿ ವ್ಯಾಪ್ತಿಯ ಆನ್ವ ರಿ ಗ್ರಾಮ ಪಂಚಾಯತಿ ಯ ಹಿರೇ ನಗನೂರು. ಗ್ರಾಮದ ವಾರ್ಡ್ ಸಂಖ್ಯೆ ೧ ಎಸ್ ಸಿ.ಪುರುಷ ಮೀಸಲು ಕ್ಷೇತ್ರದ ಅಭ್ಯರ್ಥಿ ಮೌನೇಶ ಬೊಮ್ಮನಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ಚುನಾವಣಾ ಅಧಿಕಾರಿಯಿಂದ ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ಆನ್ವರಿ ಗ್ರಾಮದ ಆರಾಧ್ಯ ದೈವ ಶ್ರೀ ಗಂಗಾ ದೇವಿ ದೇವಸ್ಥಾನ ಕ್ಕೆ ತೆರಳು ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ನನ್ನ ಮೇಲೆ ಭರವಸೆ ಇತ್ತು ನನ್ನನು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾನು ನಮ್ಮ ಸಮಾಜ,ಮತ್ತು ನನ್ನನು ಬೆಂಬಲಿಸಿದ ಸರ್ವರಿಗೂ ಚಿರಋಣಿ ನಿಮ್ಮ ಋಣ ತೀರಿಸಲು ನನಗೆ ಒದಗಿದ ಅವಕಾಶವನ್ನು ಸದುಪಯೋಗ ಪಡೆಸಿಕೊಂದು ಸಾಮಾಜಿಕ ಕಳಕಳಿ ಇರುವಂತಹ ,ಬಡವರ ಪರ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ನನ್ನನ್ನು ಆಯ್ಕೆಮಾಡಿ ಕಲಿಸಿದ ನಮ್ಮ ವಾರ್ಡ ನ ಎಲ್ಲಾ ಮತದಾರ ಪ್ರಭು ಗಳಿಗೆ ನನ್ನ ಅನಂತ ಧನ್ಯವಾದಗಳು ನಿಮ್ಮ ಆಶೀರ್ವಾದ ಈಗೆ ಮುಂದುವರೆ ಯಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಮರೇಶ್ ಭವಾನಿ ಚಿನ್ನಪ್ಪ ಕೊಟ್ರಿಕಿ , ಅಮರಪ್ಪ ಹಿರೇ ಕುರುಬರ,ಪೀರ್ ಸಾಬ್,ಮಹಮದ್ ರಫಿ, ಅಮರಪ್ಪ ದಡ್ಡಿಹಾಳ , ಸಿದ್ದಪ್ಪ ಬರ್ಜರಿ,ನಿಂಗಪ್ಪ ಹುಬ್ಬಳ್ಳಿ,ಶಾಂತಪ್ಪ ಸೋಮನಮರಡಿ, ಅಮರಪ್ಪ ಪೂಜಾರಿ, ಮೌನೇಶ ಕವಿತಾಳ, ಚಾಂದಾಬಿ, ಶಿವು ಚುಕನ ಟ್ಟಿ,ನಾಗರಾಜ್,ರಾಮಲಿಂಗ, ಅಮರ ಗುಂಡ ಮಿಂಚಿ, ಗಂಗಮ್ಮ,ಹಾಗೂ ಅನೇಕರು ಉಪಸ್ಥಿತರಿದ್ದರು.

Share and Enjoy !

Shares