ಅವಿರೋಧ ಆಯ್ಕೆಯಾ ಅಭಯಾರ್ಥಿಗಳಿಗೆ ಗ್ರಾ. ಪಂ. ಮಾಜಿ ಅಧ್ಯಕ್ಷರಿಂದ ಗೌರವ ಸನ್ಮಾನ.

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸಗೂರು :ತಾಲ್ಲೂಕಿನ ಆನ್ವರಿ ಗ್ರಾಮ ಪಂಚಾಯತಿ ಹಿರೇ ನಗನೂರು ಗ್ರಾಮದ ವಾರ್ಡ್ ಸಂಖ್ಯೆ ೧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಅವರನ್ನು ಇಂದು ಆನ್ವರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀಮತಿ ಆಗ್ನೇಶಮ್ಮ ಗಂ. ಜೋಸೆಫ್ ಸನ್ಮಾನ ಮಾಡಿ ಗೌರವ ಅರ್ಪಣೆ ಮಾಡಿದರು.
ಹಿರೇ ನಗನೂರು ಗ್ರಾಮದ ವಾರ್ಡ್ ಸಂಖ್ಯೆ ೧ ರಲ್ಲಿ ಸತತವಾಗಿ ಎರಡನೆಯ ಅವಧಿಕೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಸಮುದಾಯದ ಒಗ್ಗಟ್ಟನ್ನು ಸಾರಿದ್ದು ವಿಶೇಷವಾಗಿತ್ತು.೨೦೨೦-೨೧ ಸಾಲಿನ ಗ್ರಾ ಪಂ.ಚುನಾವಣೆಗೆ ಪರಿಶಿಷ್ಟ ಪಂಗಡದ ಮಹಿಳಾ ಮೀಸಲು ಅಭ್ಯರ್ಥಿ ಯಾಗಿ ಶ್ರೀಮತಿ ಯಲ್ಲಮ್ಮ ಗಂ.ಗಂಗಪ್ಪ ಗುರಿಕಾರ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದು,ಅದೆ ರೀತಿಯಲ್ಲೂ ಒಂದನೇ ವಾರ್ಡ್ ನ ಪರಿಶಿಷ್ಟ ಜಾತಿ ಪುರುಷ ಮೀಸಲು ಅಭ್ಯರ್ಥಿ ಸ್ಥಾನಕ್ಕೆ ಮೌನೇಶ ಬೊಮ್ಮನಹಳ್ಳಿ ವರು ಅವಿರೋಧವಾಗಿ ಆಯ್ಕೆಯಾಗಿದ್ದ ಅವರುಗಳಿಗೆ ಅಭಿನಂದಾ ಕಾರ್ಯಕ್ರಮ ಸರಳ ರೀತಿಯಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಊರಿನ ಮುಖಂಡ ಚಿನ್ನಪ್ಪ ಕೊಟ್ರಿಕಿ ನೂತನವಾಗಿ ಅದರಲ್ಲೂ ಅವಿರೋಧವಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ ತಿಳಿಸಿ ಜನಪರ ಕಾರ್ಯ ಮಾಡುತ್ತಾ ನಮ್ಮ ಸಮಾಜದ ಏಳಿಗೆಗೆ ಪೂರಕವಾಗಿವೆ ಕೆಲಸ ಮಾಡಬೇಕು ಮತ್ತು ಪರಿಶಿಷ್ಟ ವರ್ಗದ ಸಾಮಾಜಿಕ ,ರಾಜಕೀಯವಾಗಿ ಸೇಬೆಳವಣಿಗೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಅಮರೇಶ್ ಬೆಂಚಮರ ಡಿ ಮಾತನಾಡಿ ನೂತನ ಸದಸ್ಯರು ಸಮಾಜದ ಪ್ರತಿನಿಧಿಗಳು ಅವರು ಸಮಾಜದ ಏಳಿಗೆಗೆ ಶ್ರಮಿಸುವಂತೆ ಆಗಬೇಕು ನಮ್ಮ ನಾಯಕ ಸಮುದಾಯವು ಸತತವಾಗಿ ಎರಡು ಅವಧಿಗೂ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ಸಮುದಾಯದ ಒಗಟ್ಟು ಪ್ರದರ್ಶಿಸಲಾಗಿದೆ ನಮ್ಮ ಸಮುದಾಯದ ಎಲ್ಲಾ ಮುಖಂಡರಿಗೂ ಅಭಿನಂದನೆಗಳು ಮತ್ತು ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಮಾಜಿ ಉಪಾಧ್ಯಕ್ಷ ನೀತಿರಾಜ್ ಮಾತನಾಡಿ ಗ್ರಾಮದಲ್ಲಿ ರಾಜಕೀಯ ಪ್ರೇರಣೆಯಿಂದ ಸಮಾಜದಲ್ಲಿ ಒಡಕು ಉಂಟಾಗುತ್ತದೆ ಅದಕ್ಕಾಗಿ ನಾವು ತಿಳಿದು ಸಮಾಜದ ಒಗ್ಗಟ್ಟು ಕಾಪಾಡಬೇಕು ನೂತನ ಸದಸ್ಯರಿಗೆ ಅಭಿನಂದನೆಗಳು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಊರಿನ ಪ್ರಮುಖ ಮುಖಂಡರಾದ ಚಿನ್ನಪ್ಪ ಕೊಟ್ರಿಕಿ ಅಗ್ನೇಷೆಮ್ಮ, ಅಮರೇಶ್ ಭವಾನಿ,ಚಿನ್ನಪ್ಪ ಕಂದ ಹಳ್ಳಿ , ಅಭ್ರಾಂ ಸೊಲಬೂರು, ಶಿದ್ದಪ್ಪ ಕಡೆಮನಿ, ಅಮರೇಶ್ ಬೆಂಚ ಮರಡಿ, ನೀತೀರಾಜ್, ಜೋಶೆಪ್, ಶಿವು ಚು ಕ ನ ಟ್ಟಿ, ಚಿನ್ನಪ್ಪ ದದ್ದೆರ, ಜಯರಾಜ್,ಅಮರಪ್ಪ,ತಿಮ್ಮಯ್ಯ,ನಿಂಗಪ್ಪ ಬೆಂಚ ಮರ ಡಿ ಹಾಗೂ ಅನೇಕ ಗ್ರಾಮಸ್ಥರು ಉಪಸ್ಥಿತಿದ್ದರು

Share and Enjoy !

Shares