ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು :ಭಕ್ತರಿಗಾಗಿ ಸಜ್ಜಾಗೊಂಡಿರುವವ ಶಾಮಿಯಾನಾಗಳು, ಅನ್ನದಾಸೋಹಕ್ಕಾಗಿ ಸಿದ್ಧಗೊಳ್ಳುತ್ತಿರುವ ವಿವಿಧ ಭಕ್ಷ್ಯಬೋಜನಗಳು, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೃಹತ್ ವೇದಿಕೆ ಈ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಂಕಲಿಮಠದಲ್ಲಿ
ಹೌದು.ಅಂಕಲಿಮಠ ಸ್ವಾಮೀಜಿ ಶ್ರೀ ವಿರಭದ್ರಯ್ಯ ಸ್ವಾಮೀಜಿ ಅವರ ಸುಪುತ್ರ ಬಸವರಾಜಯ್ಯ ಸ್ವಾಮೀಜಿ ಅವರ ವಿವಾಹ ಸಮಾರಂಭದ ಅಂಗವಾಗಿ ಅಂಕಲಿಮಠ ಸಜ್ಜಾಗಿದೆ.
ದಿನಾಂಕ 23-24 ರಂದು ನಡೆಯಲಿರುವ ಈ ವಿವಾಹ ಸಮಾರಂಭಕ್ಕೆ ರಾಜಕೀಯ ಗಣ್ಯರು ಹಾಗೂ ವಿವಿಧ ಮಠಾಧೀಶರು ಆಗಮಿಸಲಿದ್ದಾರೆ. ಹೀಗಾಗಿ ಮುಂಚಿತವಾಗಿ ಪೂರ್ವಸಿದ್ಧತೆ ಪರಿಶೀಲನೆಗೆ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ,
ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿ, ಹುನುಗುಂದ ಶಾಸಕ ದೊಡ್ಡನಗೌಡ ಲೆಕ್ಕಿಹಾಳ, ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಮಾನ್ವಿ ಮಾಜಿ ಶಾಸಕ ಬಸನಗೌಡ ಬ್ಯಾಗೋಟ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳು ಆಗಮಿಸಿದ್ರು.
ರಾಜಕೀಯ ಮುಖಂಡರು ಆಗಮಿಸಿದ್ದ ವೇಳೆ ವೇದಿಕೆ ಬಳಿ ಆಗಮಿಸಿದ ಶ್ರೀವಿರಭದ್ರಯ್ಯ ಸ್ವಾಮೀಜಿಯವರು ವೇದಿಕೆ ಹೆಲಿಪ್ಯಾಡ್ ಹಾಗೂ ಅನ್ನದಾಸೋಹದ ಸ್ಥಳವನ್ನು ವೀಕ್ಷಿಸಿದ್ರು.
ಒಟ್ಟಾರೆ ಅಂಕಲಿಮಠ ಹಲವಾರು ಪವಾಡಗಳಿಗೆ ಸಕ್ಷಿಯಾಗಿರುವ ಮಠ, ಈ ಮಠಕ್ಕಿರುವ ಭಕ್ತವೃಂದವಂತೂ ಅಪಾರ..ಅಂಕಲಿಮಠದ ಶ್ರೀಗಳ ಸುಪುತ್ರ ಬಸವಾರಜ ಮಹಾಸ್ವಾಮೀಜಿ ಅವರ ವಿವಾಹಕ್ಕೆ ಸಕಲ ರೀತಿಯಿಂದ ಮಠ ಸಿದ್ಧಗೊಂಡಿದ್ದು ಭಕ್ತಸಾಗರವೇ ಹರಿದುಬರತೊಡಗಿದೆ