ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು:ಮುದಗಲ್ಲ ಸಮೀಪದ ಸುಕ್ಷೇತ್ರ ಅಂಕಲಿ ಮಠಕ್ಕೆ ಕಾಗಿನೆಲೆಯ ಶ್ರೀಕನಕ ಗುರುಪೀಠ ತಿಂಥಣಿ ಬ್ರಿಜ್ ಸಿದ್ದರಾಮನಂದ ಸ್ವಾಮಿ ಶುಕ್ರವಾರ ಬೇಟಿ ನೀಡಿದರು. ಅಂಕಲಿಮಠದ ಶ್ರೀಅಡಿವೇಶ ನಿರುಪಾಧೀಶ್ವರರ ಗದ್ದುಗೆಗೆ ವಿಶೇಷ ಕರ್ಪೂರ ಆರತಿ ಪೂಜೆ ಸಲ್ಲಿಸಿದರು. ಅಲ್ಲದೆ ಶ್ರೀ ಮಠದಲ್ಲಿ ನಿತ್ಯ ನಡೆಯುತ್ತಿರುವ ದಾಸೋಹ ಕೇಂದ್ರ ಹಾಗೂ ಮಠದ ವಂಶಸ್ಥರ ಕರ್ತೃಗದ್ದುಗೆಗಳಿಗೆ ಬೇಟಿ ನೀಡಿ ಮಾಹಿತಿ ಪಡೆದು ಶ್ರೀಮಠದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡೆಸಿದರು. ಗುರುವಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಅಂಕಲಿ ಮಠದ ವಂಶಸ್ಥರಾದ ಶ್ರೀಬಸವರಾಜಯ್ಯನವರ ದಂಪತಿಗಳು ಹಂಪಿ ವೀರುಪಾಕ್ಷ ದೇವಸ್ಥಾನಕ್ಕೆ ತೆರಳಿದ್ದರಿಂದ ದೂರವಾಣಿ ಮೂಲಕ ನವ ದಂಪತಿಗಳಿಗೆ ವಿವಾಹದ ಶುಭಾಶಯ ತಿಳಿಸಿದರು. ಪ್ರಥಮವಾಗಿ ಅಂಕಲಿಮಠಕ್ಕೆ ಬೇಟಿ ನೀಡಿದ ತಿಂಥಣಿ ಬ್ರಿಜ್ ಕನಕ ಗುರು ಪೀಠದ ಶ್ರೀಸಿದ್ದರಾಮನಂದ ಸ್ವಾಮಿಯವರಿಗೆ ಮಠದ ಪರವಾಗಿ ಸತ್ಕರಿಸಿ ಗೌರವಿಸಲಾಯಿತು. ಈ ಸಂದರ್ಭ ಕೊಪ್ಪಳದ ಹಾಲವರ್ತಿ ಶ್ರೀಶಿವಸಿದ್ದೇಶ್ವರ ಸ್ವಾಮಿ, ಅಂಕಲಿಮಠದ ವೀರಯ್ಯ ಸ್ವಾಮಿ, ಮುಖಂಡರಾದ ಸಣ್ಣ ಸಿದ್ದಯ್ಯ ಮೇಗಳಪೇಟೆ, ಹನುಮಂತಪ್ಪ ಕಂದಗಲ್, ತಿಂಥಣಿ ಶ್ರೀಕನಕ ಗುರುಪೀಠದ ಮಾಧ್ಯಮ ಸಂಚಾಲಕ ಶರಣಯ್ಯ ಒಡೆಯರ್ ಸೇರಿ ಇನ್ನಿತರರು ಇದ್ದರು.